ಚಿತ್ರದುರ್ಗ: ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ರಾಜ್ಯದಲ್ಲಿ ಇರೋದು ಮನೆಹಾಳು ಸರ್ಕಾರ. ಈ ಸರ್ಕಾರದ ಕೈಯಲ್ಲಿ ಅಭಿವೃದ್ಧಿಗೆ ಅನುದಾನ ನೀಡಲು ಕಾಸಿಲ್ಲ. ವರ್ಗಾವಣೆ ದಂಧೆ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ದಿನ ಬೆಳಗಾದರೆ, ಸಿಎಂ ಕುರ್ಚಿ ಮೇಲೆ ಕಾಂಗ್ರೆಸ್ಸಿಗರೇ ಟವಲ್ ಹಾಕುತ್ತಿದ್ದಾರೆ. ಅಲ್ಲಿನ ನಾಯಕರೇ ಕುರ್ಚಿಗಾಗಿ ಜಗಳ ಮಾಡುತ್ತಿದ್ದಾರೆ. ತೆರೆ ಮರೆಯ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ನಾನೇ ಇರ್ತೀನಿ ಅಂತ ಸಾವಿರ ಬಾರಿ ಹೇಳಿದ್ದಾರೆ. ಯಾವ ಸಿಎಂ ಕೂಡ ಈ ರೀತಿ ಹೇಳಿಲ್ಲ. ಗಟ್ಟಿ ಇದ್ದರೆ, ಯಾರೂ ಹೇಳಲ್ಲ. ಸರ್ಕಾರದ ಸ್ಥಿತಿ ಡೋಲಾಯಮಾನ ಇರುವುದರಿಂದಾಗಿ ಎಲ್ಲರೂ ಆತಂಕದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.