ಬೆಂಗಳೂರು: ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಸೆಟ್ ಗಾಗಿ ಮರಗಳ ಮಾರಣಹೋಮ ನಡೆದಿದ್ದು, ಅರಣ್ಯ ಇಲಾಖೆಯಿಂದ ಎಫ್ ಐಆರ್ ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದುಕೊಂಡು ಮೂರು ಸಂಸ್ಥೆಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಟಾಕ್ಸಿಕ್ ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಗ್ರೌಂಡ್‌ನಲ್ಲಿ ಸೆಟ್ ಹಾಕಿದ್ದ ಚಿತ್ರತಂಡ, ಮರಗಳನ್ನು ನಾಶ ಮಾಡಿತ್ತು. ಈ ಕುರಿತು ಸ್ಯಾಟಲೈಟ್ ಚಿತ್ರದ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದ ಅರಣ್ಯ ಇಲಾಖೆ, ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪದ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣ ತಂಡ ಹಾಗೂ ಇತರರ ವಿರುದ್ದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಎಫ್ ಐಆರ್ ದಾಖಲಿಸಿದೆ. ಕೆವಿಎನ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಎಚ್‌ಎಂಟಿ ಲಿಮಿಟೆಡ್ ಸಂಸ್ಥೆಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.