ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಅಧಿಕಾರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಆರೋಪ ಹೊರಿಸಿದೆ. ಈಗ ಮತ್ತಷ್ಟು ಸ್ಫೋಟಕ ಅಂಶ ಹೊರ ಬಿದ್ದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲುಗೆ ಸಂಕಷ್ಟ ಶುರುವಾಗಿದೆ.
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದು, ಈ ಆಯೋಗ ಮಧ್ಯಂತರ ವರದಿ ನೀಡಿದೆ. ವರದಿ ಆಧರಿಸಿ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದೆ. ಸ್ಥಳೀಯ ಕಂಪನಿಗಳಿಂದ 446 ರೂಪಾಯಿ ಪಿಪಿಇ ಕಿಟ್ ಖರೀದಿ ಮಾಡಿತ್ತು. ಆದರೆ, ಚೀನಾ ಕಂಪನಿಗಳಿಗೆ ಮಾತ್ರ 2 ಸಾವಿರದ 117 ರೂಪಾಯಿ ಕೊಟ್ಟಿತ್ತು. 2 ಕಂಪನಿಗಳ ಪಿಪಿಇ ಕಿಟ್ ಕೂಡ ಒಂದೇ ಗುಣಮಟ್ಟದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ, ಬಿಜೆಪಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಖಾಸಗಿ ಲ್ಯಾಬ್ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. ಆದ್ರೆ 14 ಲ್ಯಾಬ್ಗಳು ICMRನಿಂದ ಮಾನ್ಯತೆ ಪಡೆದಿಲ್ಲ. RTPCR ಟೆಸ್ಟ್ಗೆ ಲ್ಯಾಬ್ಗಳ ಸಾಮರ್ಥ್ಯ, ಕ್ಷಮತೆ ಗುರುತಿಸಿಲ್ಲ. ಸಾಮರ್ಥ್ಯ, ಕ್ಷಮತೆ ಪರಿಶೀಲಿಸದೆ ಲ್ಯಾಬ್ಗಳಿಗೆ ಅನುಮತಿ ನೀಡಲಾಗಿದೆ. 6 ಖಾಸಗಿ ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಲಾಗಿದೆ. ಅನಧಿಕೃತವಾಗಿ ಹಣ ಸಂದಾಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ವಿಧಿಸಿ ಖರೀದಿ ಮಾಡಿದ್ದಾರೆ. ಬಿಜೆಪಿ ಹೆಣದ ಮೇಲೆ ಹಣ ಮಾಡಿದೆ. 49 ಕೋಟಿ ವಸೂಲಿ ಮಾಡಲು ಕುನ್ನಾ ಕಮೀಟಿ ವರದಿ ನೀಡಿದೆ. ಪಿಪಿಇ ಕಿಟ್,ಸಿಟಿ ಸ್ಕ್ಯಾನ್,ವೆಂಟಿಲೆಟರ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಕಿದ್ವಾಯಿ ಅಸ್ಪತ್ರೆಯ ಆರ್ ಟಿಪಿಸಿಆರ್ ಟೆಸ್ಟಿಂಗ್ ನಲ್ಲಿ 200 ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ.