ನಟಿ ಸಮಂತಾ ( samantha ) ಅವರು ಸಿನಿಮಾದಿಂದ ದೂರ ಉಳಿದು, ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಮಯೋಸಿಟಿಸ್ ಹಾಗೂ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಸಮಂತಾ ಸದ್ಯ ಸಿನಿಮಾಗಳಿಗೆ ಗ್ಯಾಪ್ ನೀಡಿ, ಚಿಕಿತ್ಸೆ ಪಡೆಯುತ್ತಿದ್ದರು.
ಅಲ್ಲದೇ, ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಂತಾ ಮತ್ತು ವರುಣ್ ಧವನ್ ಅಭಿನಯದ ಸಿಟಾಡೆಲ್ ಸರಣಿಯು ಇತ್ತೀಚೆಗೆ ಅಮೆಜಾನ್ ಪ್ರೈಮ್ OTT ನಲ್ಲಿ ಬಿಡುಗಡೆಯಾಗಿದೆ. ಸಿಟಾಡೆಲ್ ಪ್ರಚಾರಗಳಲ್ಲಿ ಸಮಂತಾ ಆಕ್ಟೀವ್ ಆಗಿದ್ದಾರೆ. ಈಗ ಮತ್ತೆ ಚಿತ್ರರಂಕಗಕ್ಕೆ ಮರಳುವ ಉತ್ಸುಕತೆಯಲ್ಲಿ ಸಮಂತಾ ಇದ್ದಾರೆ.
ನಟಿ ಸಮಂತಾ ಸಿಟಾಡೆಲ್ ಸರಣಿಯಲ್ಲಿ ಸಮಂತಾ ಮಗುವಿನ ತಾಯಿಯಾಗಿಯೂ ನಟಿಸಿದ್ದಾರೆ. ಈ ಸರಣಿಯ ಪ್ರಚಾರದ ಭಾಗವಾಗಿ ಬಾಲಿವುಡ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿಜ ಜೀವನದಲ್ಲಿ ತಾಯಿಯಾಗುವ ಕುರಿತು ಮಾತನಾಡಿದ್ದಾರೆ.
ಚಿತ್ರದಲ್ಲಿ ನನ್ನ ಮಗಳಾಗಿ ನಟಿಸಿದ ಮಗುವಿನೊಂದಿಗೆ ನನಗೆ ಉತ್ತಮ ಬಾಂಧವ್ಯ ಬೆಳೆಯಿತು. ಅವಳನ್ನು ನನ್ನ ನಿಜವಾದ ಮಗಳಂತೆ ಭಾವಿಸಿದೆ. ನಾನು ಇನ್ನೂ ತಾಯಿಯಾಗುವ ಕನಸು ಕಾಣುತ್ತೇನೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ. ನಾನು ಈಗ ತಡವಾಗಿಲ್ಲ. ವಯಸ್ಸಿಗೂ ತಾಯ್ತನಕ್ಕೂ ಸಂಬಂಧವಿಲ್ಲ. ನಾನು ತಾಯಿ ಎಂಬ ಭಾವನೆಯನ್ನು ಅನುಭವಿಸಲು ಬಯಸುತ್ತೇನೆ ಎಂದಿದ್ದಾರೆ. ಹೀಗಾಗಿ ನಟಿ ಮತ್ತೊಂದು ಮದುವೆಗೆ ಸಿದ್ಧವಾಗಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.