ನಟ ಪ್ರಭಾಸ್ 45 ವರ್ಷ ದಾಟಿದರೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಹೀಗಾಗಿ ಹಲವು ಬಾರಿ ಇವರ ಮದುವೆಯ ಬಗ್ಗೆ ಗಾಸಿಪ್ ಗಳು ಹಬ್ಬಿದ್ದವು. ಆನಂತರ ಅವು ಸುಳ್ಳಾಗುತ್ತಿದ್ದವು. ಈಗ ಸ್ವತಃ ಅವರೇ ಮದುವೆ ಬಗ್ಗೆ ಮಾತನಾಡಿದ್ದಾರೆ.
ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಪ್ರಭಾಸ್, ಸಾವಿರಾರು ಸೂಪರ್ ಹಿಟ್, ಕ್ಲಾಸಿಕ್ ಹಾಡುಗಳನ್ನು ಸೀತಾರಾಂ ಸೀತಾರಾಮ ಶಾಸ್ತ್ರಿ ಅವರು ಬರೆದಿದ್ದಾರೆ. ಪ್ರಭಾಸ್ ಗೆ ಅವರ ಹಾಡುಗಳೆಂದರೆ ತುಂಬಾ ಇಷ್ಟ. ಈ ಹಿನ್ನೆಲೆಯಲ್ಲಿ ಅವರ ಸೀತಾರಾಮ ಶಾಸ್ತ್ರಿ ಅವರ ಹಾಡುಗಳ ‘ನಾ ಉಚ್ವಾಸಂ ಕವನಂ’ ಹೆಸರಿನ ವಿಶೇಷ ವಿಡಿಯೋ ಸರಣಿ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಭಾಸ್ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಅವರು, ನನ್ನ ಮೊದಲ ಸಿನಿಮಾದ ಮೊದಲ ಹಾಡನ್ನು ಸೀತಾರಾಮ ಶಾಸ್ತ್ರಿಗಳೇ ಬರೆದಿದ್ದರು, ‘ಅವರ ಕನಸಿಗೆ ಅವರೇ ರಾಜ’ ಎಂಬ ಹಾಡು ನನ್ನನ್ನು ಬೆಳೆಸಿತು. ‘ನನಗೆ ಸೀತಾರಾಮ ಶಾಸ್ತ್ರಿಯವರು ನೀಡಿದ ಅಕ್ಷರ ಆಶೀರ್ವಾದ ಆ ಹಾಡು’ ಎಂದು ಹೇಳಿದ್ದಾರೆ.
ಶಾಸ್ತ್ರೀ ಅವರು ತುಂಬಾ ಅರ್ಥಗರ್ಭಿತ ಹಾಡನ್ನು ಬರೆಯುತ್ತಾರೆ. ಅವರ ಮಾತನ್ನೇ ಪಾಲಿಸುತ್ತಿದ್ದೀನಿ, ಅವರು ಮದುವೆಯ ಸಮಸ್ಯೆಗಳ ಬಗ್ಗೆ ಎಚ್ಚರ ನೀಡಿದ್ದಾರೆ, ಈಗ ನಾನು ಮದುವೆ ಆಗಬೇಕ? ಬೇಡವಾ? ಎಂದು ಅಭಿಮಾನಿಗಳ ಮುಂದೆಯೇ ಪ್ರಶ್ನೆ ಇಟ್ಟಿದ್ದಾರೆ.