ರಾಮನಗರ: ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ಹೇಳಿಕೆಗೆ ಸಚಿವ ಜಮೀರ್ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ‘ಕಾಲಿಯ’ ಪದ ಬಳಸಿ ಜನಾಂಗೀಯ ನಿಂದನೆ ಮಾಡಿರುವ ಆರೋಪ ಹಾಗೂ ನಿನ್ನ ರೇಟ್ ಎಷ್ಟು ಎಂದು ಪ್ರಶ್ನಿಸಿ ವಿವಾದಕ್ಕೆ ಈಡಾಗಿದ್ದರು. ಹೀಗಾಗಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ನನ್ನ ಹಳೆಯ ಸ್ನೇಹಿತರು. ಹೀಗಾಗಿ ಅವರನ್ನು ಯಾವಾಗಲೂ ಕರಿಯಣ್ಣ ಅಂತ ನಾನು ಕರೆಯುತ್ತೇನೆ. ಅವರು ನನ್ನ ಕುಳ್ಳ ಎಂದು ಕರೆಯುತ್ತಾರೆ.
ಮುಸ್ಲಿಂ ಮತಗಳು ಮಾರಾಟಕ್ಕೆ ಇಲ್ಲ ಎಂದು ನಾನು ಹೇಳಿದ್ದೆನೆಯೇ ಹೊರತು ಬೇರೆ ಮಾತನಾಡಿಲ್ಲ ಎಂದಿದ್ದಾರೆ. ನಾವಿಬ್ಬರು ಪ್ರೀತಿಯಿಂದ ಹಾಗೆಲ್ಲ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.