ನೆಲಮಂಗಲ: ಪಿತ್ರಾರ್ಜಿತ ಆಸ್ತಿ ಕೊಟ್ಟಿಲ್ಲ ಎಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿಯನ್ನು ಅಜ್ಜಿ ನೀಡಿಲ್ಲವೆಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಶಿವನಗರದ ಪೃಥ್ವಿ(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪದವಿ ಪಡೆದು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಅಜ್ಜಿ ಕುಳಯಮ್ಮ ಮತ್ತಿಕೆರೆಯ ಮನೆಯೊಂದನ್ನು ತನ್ನ ಮಗನ ಮಕ್ಕಳಿಗೆ ಆಸ್ತಿ ಕೊಡದೆ ಹೆಣ್ಣು ಮಗಳಿಗೆ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಸಂಬಂಧಿಕರನ್ನು ಸೇರಿಸಿ ಮಾತುಕತೆ ನಡೆಸಲಾಗಿತ್ತು. ಮಾತುಕತೆ ವಿಫಲವಾಗಿದೆ. ಈ ಘಟನೆಯಿಂದ ಮನನೊಂದ ಪೃಥ್ವಿ, ಮನೆಯ ಕೋಣೆಯಲ್ಲಿ ವೇಲ್ ಬಳಸಿ ಪ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ತಾಯಿ ರೂಮ್ ಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.