ಹಾವೇರಿ: ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಬರೀ ಸರ್ಕಾರ ಕಿತ್ತಾಕ್ತೇವಿ. ಸರ್ಕಾರ ಕಿತ್ತಾಕ್ತೇವಿ ಅಂತಾರೆ. ಸರ್ಕಾರ ಕಿತ್ತಾಕೋಕೆ ಏನು ಕಡ್ಲೆಕಾಯಿ ಗಿಡವೇ? ಎಂದು ಗುಡುಗಿದ್ದಾರೆ.
ಕುಮಾರಸ್ವಾಮಿ ಮತ್ತು ವಿಜಯೇಂದ್ರಗೆ ಹೇಳ್ತಿದ್ದೀನಿ, ಸರ್ಕಾರ ಕಿತ್ತಾಕೋಕೆ ಆಗಲ್ಲ. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗ ಏನೂ ನಿಮಗೆಲ್ಲ ಹರಿಯಲು ಆಗಲಿಲ್ಲ. ಈಗ ಹರಿತೀನಿ ಹರಿತೀನಿ ಎಂದು ಹೇಳ್ತಿದ್ದೀರಿ. ಆದರೆ, ನಿಮ್ಮ ಕೈಯಿಂದ ಏನೂ ಆಗಲ್ಲ. ನಿಮ್ಮದು ಬರೀ ಮಾತು ಎಂದು ವ್ಯಂಗ್ಯವಾಡಿದ್ದಾರೆ.