ಹಾವೇರಿ : ಜಾತಿಗಳಿಗೆಲ್ಲ ಬೆಂಕಿ ಹಚ್ಚಿ, ಕುಂಕುಮ, ಭಂಡಾರ ಎಂಬ ಜಗಳ ಬಿಟ್ಟು, ಹಿಂದೂಗಳೆಲ್ಲ ಒಂದಾಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರೈತರ ಜಮೀನು ವಕ್ಪ್ ಗೆ ಹೋಗುತ್ತಿವೆ. ಜಮೀರ್ ಅಹ್ಮದ್ ನಮಗೆ ಅಲ್ಲಾ ಕೊಟ್ಟಿದ್ದಾನೆ ಅಂತಾನೆ. ಹೀಗಾಗಿ ನಾವೆಲ್ಲ ಜಾತಿಗಳಿಗೆ ಬೆಂಕಿ ಹಚ್ಚಿ ಒಂದಾಗಬೇಕಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವಾಗಲೇ ಹೇಳಿದ್ದರು. ಮುಸ್ಲೀಮರು ಯಾವ ದೇಶದಲ್ಲಿ ಇರುತ್ತಾರೋ ಅಲ್ಲಿ ಗಲಾಟೆ ಮಾಡುತ್ತಾರೆ. ಇದು ಅಲ್ಲಾನ ಆಸ್ತಿ ನಾವು ಕೊಡಲ್ಲ ಅಂತಾರೆ. ಬೊಮ್ಮಾಯಿ ಮಗನನ್ನು ಸೋಲಿಸಲು, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಮಂತ್ರಿಗಳು ಬಂದಿದ್ದಾರೆ. ಕಾಂಗ್ರೆಸ್ ನವರ ನೋಟು ತೆಗೆದುಕೊಂಡು ಬಿಜೆಪಿಗೆ ಓಟ್ ಹಾಕ್ರಿ ಎಂದು ಮನವಿ ಮಾಡಿದರು.
ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಗ್ಯಾರಂಟಿ ಬಿಟ್ಟು ಹೊಸದೇನಾದರೂ ಹೇಳಿದ್ದಾರಾ? ಎಂದು ಗುಡುಗಿದ್ದಾರೆ.
ಬಿಜೆಪಿ ಅವಧಿಯಲ್ಲಿ ಮಂತ್ರಿ ಸ್ಥಾನ ಬೇಡ, ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಮ್ಮ ಸರ್ಕಾರದ ವಿರುದ್ಧವೇ ಹೋರಾಟ ಮಾಡಿದ್ದೇವು. ನಮಗೆ ಪ್ರವರ್ಗ 2 ಡಿ ಅಡಿ ಮೀಸಲಾತಿ ಅವಕಾಶ ಕಲ್ಪಿಸಿದ್ದರು. ಆದರೆ, ಈ ಸರ್ಕಾರ ಅದನ್ನು ಪಾಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.