ಬಾಲಿವುಡ್ ನಲ್ಲಿ ಸಾಕಷ್ಟು ಕಾಂಟ್ರವರ್ಸಿ ಸೃಷ್ಟಿಸಿ, ಸಾಕಷ್ಟು ಸದ್ದು ಮಾಡಿದ್ದ ನಟಿ ರಾಖಿ ಸಾವಂತ್ ಈಗ ದುಬೈನಲ್ಲಿ ಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಈ ಕುರಿತು ಸ್ವತಃ ನಟಿ ಹೇಳಿಕೊಂಡಿದ್ದಾರೆ. ದುಬೈನಲ್ಲಿ ನಾನು ಭಿಕ್ಷುಕಿಯಂತೆ ಬದುಕ್ಕಿದ್ದೇನೆ ಎಂದಿದ್ದಾರೆ. ಇದಕ್ಕೆಲ್ಲ ಅವರ ಮಾಜಿ ಪತಿ ಕಾರಣ ಎನ್ನಲಾಗುತ್ತಿದೆ. ಮೈಸೂರಿನ ಆದಿಲ್ ನೀಡಿರುವ ದೂರಿನಿಂದಾಗಿ ರಾಖಿ ಸಾವಂತ್ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ, ಮಾನಹಾನಿ ಸೇರಿದಂತೆ ಹಲವು ದೂರುಗಳನ್ನು ದಾಖಲಿಸಿದ್ದಾರೆ.
ಹೀಗಾಗಿ ರಾಖಿ ಬಂಧನ ಭೀತಿಯಿಂದಾಗಿ ದುಬೈಗೆ ಹೋಗಿದ್ದಾರೆ. ಆದರೆ, ಅವರ ಬಳಿ ಹಣವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ನಾನು ಬೇರೆಯವರ ಹತ್ತಿರ ಎಷ್ಟು ದಿನ ಅಂತಾ ಸಹಾಯ ಕೇಳಲಿ. ಹೀಗಾಗಿ ಭಿಕ್ಷುಕಿಯಂತೆ ಆಗಿ ಬಿಟ್ಟಿದ್ದೇನೆ. ನನಗೆ ಭಾರತೀಯ ಕಾನೂನಿನ ಮೇಲೆ ವಿಶ್ವಾಸವಿದೆ. ನಾನು ಭಾರತಕ್ಕೆ ಮರಳಲಿದ್ದೇನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ರಾಖಿ ಸಾವಂತ್ 2022ರಲ್ಲಿ ಮೈಸೂರಿನ ಉದ್ಯಮಿ ಆದಿಲ್ ಖಾನ್ ಜೊತೆ ವಿವಾಹವಾಗಿದ್ದರು. ಆದಿಲ್, ಐಶಾರಾಮಿ ಕಾರುಗಳನ್ನು ರಾಖಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಕ್ಕೆ ಆದಿಲ್ ವಿರುದ್ಧ ರಾಖಿ ಸಾವಂತ್ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಆದಿಲ್ ಜೈಲು ಸೇರಿದ್ದರು. ಜೈಲಿನಿಂದ ಹೊರಬಂದು ರಾಖಿ ವಿರುದ್ಧ ವಂಚನೆ, ಕಳ್ಳತನ ಸೇರಿದಂತೆ ಕೆಲವು ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ರಾಖಿ ದುಬೈಗೆ ಪಲಾಯನವಾಗಿದ್ದರು.