ಭಾರತೀಯ ಕ್ರಿಕೆಟ್ ತಂಡದ ವಾಲ್ ರಾಹುಲ್ ದ್ರಾವಿಡ್ ಅವರ ಮತ್ತೋರ್ವ ಪುತ್ರ ಕೂಡ ಈಗ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯ್ ಮರ್ಚೆಂಟ್ ಟ್ರೋಫಿ ಡಿ. 16ರಿಂದ ಆರಂಭವಾಗಲಿದ್ದು, ಈ ಟೂರ್ನಿಗಾಗಿ 35 ಜನ ಸಂಭಾವ್ಯ ಆಟಗಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಕೂಡ ಸ್ಥಾನ ಪಡೆದಿದ್ದಾರೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡದಲ್ಲಿದ್ದಾರೆ. ಈಗ ಕಿರಿಯ ಪುತ್ರ ಕೂಡ ಅದೇ ಹಾದಿ ಹಿಡಿದಿದ್ದಾರೆ.
ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಕಳೆದ ವರ್ಷ ನಡೆದ ಅಂತರ್ ವಲಯ ಕೂಟದಲ್ಲಿ 14 ವರ್ಷದೊಳಗಿನವರ ರಾಜ್ಯ ತಂಡದ ನಾಯಕನಾಗಿ ಅನ್ವಯ್ ಕಾಣಿಸಿಕೊಂಡಿದ್ದ. ಅಲ್ಲದೇ, ಕೆಎಸ್ ಸಿಎ 16 ವರ್ಷದೊಳಗಿನ ಅಂತರ್ ವಲಯ ಟೂರ್ನಿಯಲ್ಲಿ ತುಮೂಕುರ ವಲಯ ವಿರುದ್ಧ ಬೆಂಗಳೂರು ವಲಯ ಪರವಾಗಿ ಅನ್ವಯ್ ಬರೋಬ್ಬರಿ ಅಜೇಯ 200 ರನ್ ಗಳಿಸಿ ಮಿಂಚಿದ್ದ. ಪರಿಣಾಮವಾಗಿ ಅನ್ವಯ್ ಗೆ ಸ್ಥಾನ ಸಿಕ್ಕಿದೆ.