ನವದೆಹಲಿ: ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವ ಸಂಚಿನಲ್ಲಿ ನಮ್ಮ ಪಾತ್ರವಿಲ್ಲ ಎಂದು ಇರಾನ್ ಹೇಳಿದೆ.
ಟ್ರಂಪ್ ಕೊಲ್ಲುವ ಸಂಚಿನ ವಿಷಯಕ್ಕೆ ಸಂಬಂಧಿಸಿದಂತೆ ಇರಾನ್ ವ್ಯಕ್ತಿಯೊಬ್ಬನ ಮೇಲೆ ಅಮೆರಿಕ ಆರೋಪ ಹೊರಿಸಿದ ಬೆನ್ನಲ್ಲೇ ಇರಾನ್ ಈ ಕುರಿತು ಸ್ಪಷ್ಟನೆ ನೀಡಿದೆ. ಇದು ಯುಎಸ್ ಮತ್ತು ಇರಾನ್ ನಡುವಿನ ಸಮಸ್ಯೆಗಳನ್ನು ಸಂಕೀರ್ಣಗೊಳಿಸುವ ಪಿತೂರಿ ಎಂದು ಆರೋಪಿಸಿದೆ.
ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೈಲ್ ಬಘೈ ಆಪಾದಿತ ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. ಅಲ್ಲದೇ, ಸಂಚಿನ ವರದಿಯನ್ನು “ಸಂಪೂರ್ಣವಾಗಿ ಆಧಾರರಹಿತ” ಎಂದು ಹೇಳಿದೆ. ಯುಎಸ್ ಮತ್ತು ಇರಾನ್ ನಡುವಿನ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಲು ಜಿಯೋನಿಸ್ಟ್ ಮತ್ತು ಇರಾನಿಯನ್ ವಿರೋಧಿ ವಲಯಗಳಿಂದ ಆಯೋಜಿಸಲಾದ ದುರುದ್ದೇಶಪೂರಿತ ಪಿತೂರಿ ಇದು ಎಂದು ಇರಾನ್ ಸರ್ಕಾರ ಹೇಳಿದೆ.