ಪುಷ್ಪ 2’ ಸಿನಿಮಾ ಬಿಡುಗಡೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಹೊಸ ಪ್ರಯೋಗಕ್ಕೆ ಚಿತ್ರ ತಂಡ ಮುಂದಾಗಿದೆ ಎನ್ನಲಾಗುತ್ತಿದೆ.
ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ಟಾಕ್ ಶೋ ಒಂದರಲ್ಲಿ ಭಾಗವಹಿಸುವುದರ ಮೂಲಕ ಅದರ ಪ್ರಚಾರ ಆರಂಭಿಸಲಿದ್ದಾರೆ. ಎನ್ನಲಾಗುತ್ತಿದೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಚಿತ್ರದ ಬಹುತೇಕ ಹಾಡುಗಳು ಕೂಡ ಅಭಿಮಾನಿಗಳು ಮನಸ್ಸು ಗೆದ್ದಿದ್ದವು. ‘ಶ್ರೀವಲ್ಲಿ’ ಹಾಗೂ ‘ಊ ಅಂಟಾವ’ ಹಾಡಂತೂ ಈಗಲೂ ವೈರಲ್ ಆಗುತ್ತಿವೆ. ಇದಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆದರೆ, ಈಗ ಬೇರೊಬ್ಬರಿಂದ ಸಂಗೀತ ಕೊಡಿಸಲು ಚಿತ್ರ ತಂಡ ಮುಂದಾಗಿದೆ.
ಅಂದರೆ, ಈಗಾಗಲೇ ಕೆಲವು ಹಾಡುಗಳಿಗೆ ದೇವಿಶ್ರೀ ಅವರೇ ಸಂಗೀತ ನೀಡಿದ್ದಾರೆ. ಆದರೆ, ಚಿತ್ರದ ಹಿನ್ನೆಲೆ ಸಂಗೀತಕ್ಕೆ ಮತ್ತೊಬ್ಬ ಸ್ಟಾರ್ ಸಂಗೀತ ನಿರ್ದೇಶಕರನ್ನು ಸೆಳೆಯಲಾಗಿದೆ. ಇದಕ್ಕೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ದಕ್ಷಿಣ ಚಿತ್ರರಂಗದಲ್ಲಿ ಪ್ರಸ್ತುತ ಹಾಟ್ ಸ್ಟಾರ್ ಆಗಿರುವ ಅನಿರುದ್ಧ್ ರವಿಚಂದ್ರನ್ ಅವರಿಂದ ‘ಪುಷ್ಪ 2’ ಸಿನಿಮಾಕ್ಕೆ ಸಂಗೀತ ಕೊಡಿಸಲಾಗುತ್ತಿದೆ ಎಂಬ ಮಾತುಗಳು ವೈರಲ್ ಆಗುತ್ತಿವೆ. ಆದರೆ, ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.