ಮಂಡ್ಯ: ಇತ್ತೀಚೆಗೆ ರೈತರ ಭೂಮಿಯಲ್ಲಿ ವಕ್ಫ್ ಹೆಸರು ಸೇರಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಸರ್ಕಾರಿ ಶಾಲೆಯ ಪಹಣಿಯಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಶ್ರೀರಂಗಪಟ್ಟಣ (Srirangapattana) ತಾಲೂಕಿನ ಚಂದಗಾಲು ಗ್ರಾಮದಲ್ಲಿನ ಸರ್ಕಾರ ಶಾಲೆಯ ಸರ್ವೆ ನಂ 215ರ 30 ಗುಂಟೆ ಜಮೀನಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ವಕ್ಫ್ ಆಸ್ತಿ ಅಂತ 2015ರಲ್ಲೇ ಆಗಿದ್ದು, ಪಹಣಿ ಪರಿಶೀಲಿಸಿದಾಗ ತಿಳಿದು ಬಂದಿದೆ. ವಕ್ಫ್ ಮಂಡಳಿ ಶಾಲೆ ಜಾಗ ಕಬಳಿಕೆಗೆ ಮುಂದಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ಸರ್ವೆ ನಂ. 472ರಲ್ಲಿ 20 ಎಕರೆ ಜಾಮೀಯ ಮಸೀದಿಗೆ, 34 ಎಕರೆ 12ಗುಂಟೆ ಸೂಫಿ ಸಂತರಿಗೆ, ಸರ್ವೆ ನಂ 73ರಲ್ಲಿ 6 ಎಕರೆ 6 ಗುಂಟೆ ಖಬರಸ್ಥಾನ್‌ಗೆ ಪಹಣಿ ಮಾಡಲು ಪತ್ರದಲ್ಲಿ ಮನವಿ ಮಾಡಲಾಗಿದೆ. ಆ ಜಮೀನುಗಳ ಸ್ಕೆಚ್ ಕೂಡ ಆಗಿದೆ ಎಂದು ಆದೇಶ ಸಂಖ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪತ್ರದಲ್ಲಿ ಉಲ್ಲೇಖಿಸಿರುವ ಸರ್ವೆ ನಂ. 472ರಲ್ಲಿ 14.24 ಗುಂಟೆ ಗೋಮಾಳ ಇದ್ದು, 5ಕ್ಕೂ ಹೆಚ್ಚು ರೈತರಿಗೆ ಸೇರಿದ 19.88 ಗುಂಟೆ ಜಮೀನು ಆಗಿದೆ. ಗೋಮಾಳ ಹಾಗೂ ರೈತರಿಗೆ ಜಮೀನುಗಳನ್ನು ತಮ್ಮ ಹೆಸರಿಗೆ ಪಹಣಿ ಮಾಡಲು ಕ್ರಮ ವಹಿಸುವಂತೆ ಮುಸ್ಲಿಂ ಸಮುದಾಯ ಮನವಿ ಮಾಡಿದೆ.