ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಆರಂಭವಾಗಿದ್ದು, ಮೂರನೇ ಪಂದ್ಯದಲ್ಲೂ ಭಾರತ ಹೀನಾಯ ಪ್ರದರ್ಶನ ಮುಂದುವರೆದಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ನಡೆಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 235 ರನ್ ಗಳಿಗೆ ಆಲೌಟ್ ಆಯಿತು. ಭಾರತ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ.
ಈ ಮೂಲಕ ಭಾರತದ ಟಾಪ್ ಆರ್ಡರ್ ಭಾರತಕ್ಕೆ ಕೈ ಕೊಟ್ಟಿದೆ. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ತೀರ ಅಗ್ಗವಾಗಿ ತಮ್ಮ ವಿಕೆಟ್ ಒಪ್ಪಿಸಿದರು. ಶುಭ್ಮನ್ ಗಿಲ್ ಹಾಗೂ ರಿಷಬ್ ಪಂತ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ಕೂಡ ಬೇಗನೆ ಆಲ್ ಔಟ್ ಆಯಿತು. ಭಾರತ ತಂಡ ಒಂದು ಹಂತದಲ್ಲಿ 1 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿತ್ತು. ಕೇವಲ 6 ರನ್ ಕಲೆಹಾಕುವಷ್ಟರಲ್ಲಿ ತಂಡದ ಮೂರು ವಿಕೆಟ್ ಪತನವಾದವು. ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಅವರು ಸತತ ಎರಡು ಬೌಲ್ ಗಲಲ್ಲಿ ಔಟ್ ಆದರು.
ಕೊಹ್ಲಿ ಕೇವಲ ನಾಲ್ಕು ರನ್ ಗಳಿಸಿ ಸುಸ್ತಾದರೆ, ಯಶಸ್ವಿ ಜೈಸ್ವಾಲ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗಿಲ್ ಹಾಗೂ ಜೈಸ್ವಾಲ್ ನಡುವೆ ಅರ್ಧಶತಕದ ಜೊತೆಯಾಟ ನಾಳೆಗೂ ಮುಂದುವರೆಯಲಿದೆ. ಮೊದಲ ದಿನದಾಟದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಇನ್ನೂ ನ್ಯೂಜಿಲೆಂಡ್‌ಗಿಂತ 149 ರನ್ ಹಿಂದಿದ್ದು, ಸಂಕಷ್ಟಕ್ಕೆ ಸಿಲುಕಿದೆ.