ಬೆಂಗಳೂರು: ಕರ್ನಾಟಕ ಸುವರ್ಣ ಸಂಭ್ರಮ -50ರ ಹಿನ್ನೆಲೆಯಲ್ಲಿ 100 ಜನ ಸಾಧರಿಗೆ ಸುವರ್ಣ ಸಂಭ್ರಮ (Suvarna Sambrama) ಎಂಬ ವಿಶೇಷ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
50 ಜನ ಸಾಧಕ ಪುರುಷರಿಗೆ ಹಾಗೂ 50 ಜನ ಸಾಧಕ ಮಹಿಳೆಯರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಆಗಿರುವುದರಿಂದ ವಿಶೇಷ ವರ್ಷ ಎಂದು ಪರಿಗಣಿಸಿ ಹಬ್ಬದಂತೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಸುವರ್ಣ ಸಂಭ್ರಮ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. “ಕರ್ನಾಟಕ ಸಂಭ್ರಮ -೫೦ರ ಸವಿನೆನಪಿನಲ್ಲಿ ಕೊಡಮಾಡುತ್ತಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೆ ಅಭಿನಂದನೆಗಳು. ಪ್ರಶಸ್ತಿ ವಿಜೇತ ಗಣ್ಯರ ಸೇವೆ – ಸಾಧನೆ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ.ಎಂದು ಟ್ವೀಟ್ ಮಾಡಿದ್ದಾರೆ.