ಹಾಸನ: ಹಾಸನಾಂಬೆ (Hasanaamba) ದೇವಿ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ವರ್ಷದಲ್ಲಿ ಒಂಭತ್ತು ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಭಕ್ತ ಸಮೂಹ ಹರಿದು ಬರುತ್ತಿದೆ.
ಸಾಮಾನ್ಯ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಹಲವರು ಟಿಕೆಟ್ ಪಡೆದು ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದಾಗಿ ದೇವಾಲಯಕ್ಕೆ ಕೋಟ್ಯಾಂತರ ರೂ. ಆದಾಯ ಕೂಡ ಹರಿದು ಬರುತ್ತಿದೆ.
ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದಾರೆ. ಭಾನುವಾರ ರಾತ್ರಿ 7 ಗಂಟೆಯವರೆಗೂ 22,217 ಭಕ್ತರು 300 ರೂ. ಟಿಕೆಟ್ ಪಡೆದು ದೇವಿ ದರ್ಶನ ಪಡೆದಿದ್ದಾರೆ. 300 ರೂ. ಟಿಕೆಟ್ ಮಾರಾಟದಿಂದ ಭಾನುವಾರ ರಾತ್ರಿ 7 ಗಂಟೆವರೆಗೆ 66,35,100 ರೂ. ಸಂಗ್ರಹವಾಗಿದೆ. 1000 ರೂ. ಟಿಕೆಟ್ ಮಾರಾಟದಿಂದ ಭಾನುವಾರ ರಾತ್ರಿ 7 ಗಂಟೆವರೆಗೆ 1,57,13,000 ರೂ. ಸಂಗ್ರಹವಾಗಿದೆ. ಲಾಡು ಪ್ರಸಾದ ಮಾರಾಟದಿಂದ 18,45,000 ರೂ. ಸಂಗ್ರಹವಾಗಿದೆ. ಹೀಗಾಗಿ ಒಟ್ಟು 2,41,93,100 ರೂ. ಹಣ ಸಂಗ್ರಹವಾಗಿದೆ.
ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೂವನಹಳ್ಳಿ ಹೆಲಿಪ್ಯಾಡ್ ಗೆ ಆಗಮಿಸುತ್ತಾರೆ. ನಂತರ ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ.