ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಈ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿರುವ ದರ್ಶನ್ ಗೆ ಬೆನ್ನು ನೋವು ಸಹಿಸಿಕೊಳ್ಳಲು ಆಗುತ್ತಿಲ್ಲ.
ಹೀಗಾಗಿ ದರ್ಶನ್ ಜೈಲಿನಲ್ಲಿ ತೀವ್ರವಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ವೀಕ್ಷಕರ ಕೊಠಡಿಯಿಂದ ತಮ್ಮ ಸೆಲ್ಗೆ ವಾಪಸ್ ಹೋಗುತ್ತಿದ್ದಾಗ ಅವರು ನಡೆಯಲು ಸಾಧ್ಯವಾಗದೆ ಕಷ್ಟ ಪಟ್ಟಿದ್ದಾರೆ. ಬ್ಯಾಗ್ ಹಿಡಿದುಕೊಂಡು ನಡೆಯುವಾಗ ಎರಡು ಬಾರಿ ಅವರು ನಿಂತಲ್ಲೇ ನಿಂತಿದ್ದಾರೆ. ಬೆನ್ನು ನೋವಿನಿಂದ ದರ್ಶನ್ ಒದ್ದಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ. ಹೀಗಾಗಿ ಅವರಿಗೆ ಎಂಆರ್ ಐ ಸ್ಕ್ಯಾನಿಂಗ ಮಾಡಲಾಗಿದ್ದು, ಜಾಮೀನು ಸಿಕ್ಕ ನಂತರ ದರ್ಶನ್ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳುವ ಇರಾದೆಯಲ್ಲಿದ್ದಾರೆ.