ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಮಹಿಳೆಯೊಬ್ಬರು ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.
ಪೀಣ್ಯದ ಸುವರ್ಣ ನಗರ ಬಸ್ ನಿಲ್ದಾಣದ ಹತ್ತಿರ ನಡೆದಿದೆ. 6 ಜನರಿಂದ ಈ ಕೃತ್ಯ ನಡೆದಿದೆ. ಮಹಿಳೆಯನ್ನು ಕಿಡ್ನ್ಯಾಪ್ ಮಾಡಿರುವುದನ್ನು ನೋಡಿದ್ದೇನೆ ಎಂದು ಯುವಕನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸತ್ಯಜಿತ್ ಚೌದರಿ ಎಂಬಾತನಿಂದ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಾಯಿಯ ಜೊತೆ ವಾಸವಾಗಿದ್ದ ಪಿಜಿಯಲ್ಲಿ ಫೋನ್ನಲ್ಲಿ ಮಾತನಾಡುವಾಗ ಈ ಘಟನೆ ನಡೆದಿದೆ. ಮಹಿಳೆ ಫೋನ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹಳದಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಟಿಂಟೆಡ್ ಗ್ಲಾಸ್ ಕಾರ್ನಲ್ಲಿ ಬಂದು ದುಷ್ಕೃತ್ಯ ನಡೆಸಲಾಗಿದೆ. ಕಪ್ಪು ಬಣ್ಣದ ಜಾಕೆಟ್ ಧರಿಸಿ, ಮಹಿಳೆಯ ಮುಖಕ್ಕೆ ಹಿಂಭಾಗದಿಂದ ವ್ಯಕ್ತಿ ಓರ್ವ ಬಟ್ಟೆಯಿಂದ ಅದುಮಿದ್ದಾನೆ. ಮಹಿಳೆಯನ್ನು 6 ಜನ ವ್ಯಕ್ತಿಗಳು ಎತ್ತಿಕೊಂಡು ಕಾರಿನ ಎಡಭಾಗದ ಡೋರ್ ತೆಗೆದು ಒಳಗೆ ಹಾಕಿಕೊಂಡು ಪರಾರಿ ಆಗಿದ್ದಾರೆ ಎಂದು ಯುವಕ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.