ಬೆಂಗಳೂರಿನ ದೇವಾಡಿಗ ಸಂಘದಲ್ಲಿ ಅ. 27ರಂದು ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದೆ.
ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಸಂಘದ ನೂತನ ಕಟ್ಟಡದ ಪ್ರಗತಿಯು ಭರದಿಂದ ಸಾಗುತ್ತಿದ್ದು, ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಈ ಕುರಿತಾಗಿ ಕೂಡ ಸಭೆಯಲ್ಲಿ ಚರ್ಚಿಸಲಾಗುವುದು. ನಿರ್ಮಾಣದ ಪ್ರಗತಿಯ ಕುರಿತು ಮಾಹಿತಿ ನೀಡಲಾಗುವುದು.
ಅಲ್ಲದೇ, ಕಟ್ಟಡ ಪೂರ್ಣವಾದ ನಂತರ ಕೈಗೊಳ್ಳುವ ಮುಂದಿನ ಕಾರ್ಯಕ್ರಮಗಳು, ಸೇರಿದಂತೆ ಉದ್ಘಾಟನಾ ಸಮಾರಂಭಗಳ ಯೋಜನೆಗಳನ್ನು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಮಾಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಭೆಗೆ ಎಲ್ಲರೂ ಆಗಮಿಸಿ ಸಲಹೆ- ಸೂಚನೆ ನೀಡಬೇಕು. ಸಂಘದ ಅಭಿವದ್ಧಿಗೆ ಸಹಕರಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ವಿಶು ಹಿರಿಯಡ್ಕ ಮನವಿ ಮಾಡಿದ್ದಾರೆ.