ಮೈಸೂರು: ಸಿಎಂ ಸಿದ್ದರಾಮಯ್ಯ ವರುಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಸಿಎಂ ಆಗಿದ್ದರೂ ಬಾಡಿಗೆ ಮನೆಯಲ್ಲಿದ್ದೇನೆ ಎಂದಿದ್ದರು. ಇದಕ್ಕೆ ವಿಪ ಸದಸ್ಯ ಎಚ್. ವಿಶ್ವನಾಥ್ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಮಗ ಮತ್ತು ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಸಚಿವ ಭೈರತಿ ಸುರೇಶ್ ಇದಕ್ಕೆ ಮಾಸ್ಟರ್ ಮೈಂಡ್. ಅವರ ಕ್ಷೇತ್ರದಲ್ಲೇ ಆ ಪಬ್ ಇದೆ. ಸಿದ್ದರಾಮಯ್ಯ ನಾನು ಒಳ್ಳೆಯವನು ಅಂತ ಡಂಗೂರ ಸಾರುತ್ತಿದ್ದಾರೆ. ಸಿದ್ದರಾಮಯ್ಯ ಸಾಚಾತನದ ಬಗ್ಗೆ ಜನರಿಗೆ ಗೊತ್ತಾಗಿದೆ. ಸಚಿವ ಭೈರತಿ ಸುರೇಶ್ ಒಳಗೆ ಹಾಕಿದರೆ ಎಲ್ಲ ವಿಚಾರ ಹೊರಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಕೂಡ ಮೂರು ಪಾರ್ಟಿಗಳಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ನನ್ನ ತತ್ವ ಸಿದ್ಧಾಂತ ಬಿಟ್ಟಿಲ್ಲ. ಜಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ. ಇತ್ತೀಚೆಗೆ ಪಕ್ಷ ರಾಜಕಾರಣ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ. ನಿನ್ನೆ ನಡೆದಿದ್ದು 500 ಕೋಟಿ ರೂ. ಶಿಲಾನ್ಯಾಸ ಕಾರ್ಯಕ್ರಮವೋ? ಸತ್ಯವಂತ ಅಂತಾ ಹೇಳಿಕೊಳ್ಳುವ ಕಾರ್ಯಕ್ರಮವೋ? ಗೊತ್ತಾಗಲಿಲ್ಲ ಎಂದು ವ್ಯಂಕ್ಯವಾಡಿದ್ದಾರೆ.
ಸಿ ಯೋಗೇಶ್ವರ್ನನ್ನು ಸೈನಿಕ ಅಂತಾ ಕರೆಯಬಾರದು. ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ. ಅವನೊಬ್ಬ ಫ್ರಾಡ್ ಎಂದಿದ್ದಾರೆ.