ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಮತ್ತೆ ಕೆಲವು ಬದಲಾವಣೆಗೆ ಸರ್ಕಾರ ಮುಂದಾಗಿದೆ.
ಯೋಜನೆಯಡಿ ಎಣ್ಣೆ, ಬೆಳೆಯನ್ನೊಳಗೊಂಡ ಆಹಾರ ಕಿಟ್ ನೀಡುವ ಕುರಿತು ಸರ್ಕಾರ ಚಿಂತನ ನಡೆಸಿದೆ. ಕಿಟ್ ವಿತರಿಸುವ ಕುರಿತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಒಲವು ತೋರಿದ್ದಾರೆ. ಈ ಕುರಿತು ಅ.28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗ ಕೇಂದ್ರ ಸರ್ಕಾರವು ಅಕ್ಕಿ ವಿತರಣೆಗೆ ಮುಂದಾದರೂ ಖರೀದಿಗೆ ಮಾತ್ರ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸದ್ಯ ಕೇಂದ್ರದಿಂದ ರಾಜ್ಯಕ್ಕೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಮತ್ತೆ 5 ಕೆಜಿ ಸೇರಿಸಿ ಒಟ್ಟು 10 ಕೆ.ಜಿ ವಿತರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ವಿತರಿಸಿದರೆ, ರಾಜ್ಯ ಸರ್ಕಾರ ಆಹಾರ ಕಿಟ್ ವಿತರಣೆಗೆ ಚಿಂತನೆ ನಡೆಸಿದೆ.
ಒಂದು ವೇಳೆ ಸಚಿವ ಸಂಪುಟದಲ್ಲಿ ಈ ಕುರಿತು ಒಪ್ಪಿಗೆ ಸಿಕ್ಕರೆ, ಹಣದ ಬದಲಾಗಿ ಫುಡ್ ಕಿಟ್ ಕೊಡುವ ಕುರಿತು ಸರ್ಕಾರ ಚಿಂತನೆ ನಡೆಸಲಿದೆ.