ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ ಈಗ 5G ಯತ್ತ ಮುಖ ಮಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ಮೊಬೈಲ್ ದರಗಳ ಹಿನ್ನೆಲೆಯಲ್ಲಿ ಹಲವಾರು ಜನರು BSNL ಗೆ ಪೋರ್ಟ್ ಮಾಡಿದ್ದಾರೆ. ಹೀಗಾಗು ತನ್ನ ಸೇವಾ ಗುಣಮಟ್ಟವನ್ನು ಸುಧಾರಿಸುವಲ್ಲಿ ಟೆಲಿಕಾಂ ಕಂಪನಿ ಮುಂದಾಗಿದೆ.
ಹೀಗಾಗಿ ಸಾವಿರಾರು ಹೊಸ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿದೆ. ತನ್ನ ನೆಟ್‌ವರ್ಕ್ ಅನ್ನು ಅಪ್ ಗ್ರೇಡ್ ಮಾಡುವುದರ ಜೊತೆಗೆ, BSNL ಈಗ ಖಾಸಗಿ ಟೆಲ್ಕೋಸ್ ಏರ್‌ಟೆಲ್, ಜಿಯೋ ಮತ್ತು ವಿಐನ ಪ್ರಿಪೇಯ್ಡ್ ಯೋಜನೆಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 395 ದಿನಗಳ ಮಾನ್ಯತೆಯೊಂದಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ಹೊಂದಿದೆ. ಬಳಕೆದಾರರಿಗೆ ಉಚಿತ ಕರೆ, ಡೇಟಾ ಸೇರಿದಂತೆ ಹಲವು ಪ್ರಯೋಜನ ನೀಡುತ್ತಿದೆ.
ಯಾವುದೇ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ BSNL ಮಾತ್ರ 13 ತಿಂಗಳ ಮಾನ್ಯತೆಯೊಂದಿಗೆ ಯೋಜನೆ ಹೊಂದಿದೆ. ಇತರ ಕಂಪನಿಗಳು ಗರಿಷ್ಠ 365 ದಿನಗಳ ವ್ಯಾಲಿಡಿಟಿ ಯೋಜನೆಗಳನ್ನು ಹೊಂದಿವೆ. BSNL ನ ಈ ಪ್ಲಾನ್‌ನ ವಿಶೇಷವೆಂದರೆ ಬಳಕೆದಾರರು ದಿನಕ್ಕೆ 7 ರೂಪಾಯಿಗಳಿಗಿಂತ ಕಡಿಮೆ ಖರ್ಚು ಮಾಡಿದರೆ ಸಾಕು.
ಈ BSNL ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 2,399 ರೂ. ಗಳಲ್ಲಿ ಸಿಗುತ್ತಿದೆ. ಅಂದರೆ ನೀವು ದಿನಕ್ಕೆ ಸುಮಾರು 6.57 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯ ಮಾನ್ಯತೆ 395 ದಿನಗಳು. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಅದ್ಭುತವಾದ ಲಭ್ಯವಿರುವ ಪ್ರಯೋಜನ ಸಿಗುತ್ತಿದೆ.
ಬಳಕೆದಾರರು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡುವ ಪ್ರಯೋಜನವನ್ನು ಪಡೆಯುತ್ತಾರೆ. ದಿನಕ್ಕೆ 2GB ಹೈ ಸ್ಪೀಡ್ ಡೇಟಾ ಆಯ್ಕೆ ನೀಡಲಾಗಿದೆ. ನಂತರ, ಬಳಕೆದಾರರು 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಪ್ರಯೋಜನ ಪಡೆಯುತ್ತಿದ್ದಾರೆ. ಇದರೊಂದಿಗೆ ಹಲವು ಯೋಜನೆಗಳನ್ನು ನೀಡಿದೆ. ಹೀಗಾಗಿ ಜನರು ಬಿಎಸ್ ಎನ್ ಎಲ್ ನತ್ತ ಮುಖ ಮಾಡುತ್ತಿದ್ದಾರೆ.