ಹಾಸನ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಣ ಹಂಚಿಕೆ ಮಾಡಿರುವ ಕುರಿತು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾಗಿರುವ ಆಡಿಯೊ ಬಗ್ಗೆ ದೂರು ಸಲ್ಲಿಕೆಯಾಗಿದೆ.
ಜೆಡಿಎಸ್ ನಾಯಕರು ಈ ಕುರಿತು ಆರೋಪಿಸಿ ದೂರು ನೀಡಿದ್ದಾರೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಲಿಂಗೇಶ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಮೊದಲು ದೂರು ಸ್ವೀಕರಿಸಲು ಪೊಲೀಸರು ನಿಕಾಕರಣೆ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಸುಮಾರು 17 ನಿಮಿಷ ಇರುವ ಆಡಿಯೊ ಅಂಶಗಳನ್ನು ಪ್ರಸ್ತಾಪಿಸಿ ದೂರು ಸಲ್ಲಿಕೆಯಾಗಿದೆ.
ಏಳು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮತದಾರರಿಗೆ ಹಂಚಿಕೆ ಮಾಡಿದ ಕುರಿತು ಆಡಿಯೊ ವೈರಲ್ ಆಗಿದೆ. ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೊದಲ್ಲಿ ಹಾಸನದ ಕಾಂಗ್ರೆಸ್ ನಾಯಕರಾದ ಗೋಪಾಲಸ್ಚಾಮಿ, ಬಿ ಶಿವರಾಂ ಮತ್ತು ಸಿಎಂ, ಡಿಸಿಎಂ ಹೆಸರು ಪ್ರಸ್ತಾಪ ಆಗಿದೆ. ಹವಾಲಾ ಹಣ ಕಾನೂನು ಬಾಹಿರವಾಗಿದ್ದು ಈ ಬಗ್ಗೆ ತನಿಖೆ ಆಗಬೇಕು. ಈ ಕುರಿತು ತನಿಖೆಗೆ ಒತ್ತಾಯಿಸಲಾಗಿದೆ.
ಆದರೆ, ಈ ಬಗ್ಗೆ ಮಾತನಾಡಿರುವ ಶಾಸಕ ಶಿವಲಿಂಗೇಗೌಡ, ಅದು ನಕಲಿ. ನನ್ನ ವಿರುದ್ಧ ಸಂಚು ನಡೆಯುತ್ತಿದೆ. ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ಸಂಚು ಮಾಡಲಾಗಿದೆ. ನಮ್ಮ ಮನೆಗೆ ನಿತ್ಯ ನೂರಾರು ಜನರು ಬರುತ್ತಾರೆ. ನಾನು ಮಾತನಾಡಿದ್ದನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.