ನವ ದೆಹಲಿ: ಸದ್ಗುರುವಿನ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು “ಬ್ರೈನ್ ವಾಶ್” ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್‌ನಲ್ಲಿರುವ ಇಶಾ ಫೌಂಡೇಶನ್ (Isha Foundation)ವಿರುದ್ಧ ಪ್ರಕರಣ ದಾಖಲಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ರದ್ದುಗೊಳಿಸಿದೆ.
ವ್ಯಕ್ತಿ ಆರೋಪಿಸಿರುವ ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ತೀರ್ಪು ನೀಡಿದೆ.
ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯವು ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಆಶ್ರಮದ ಮೇಲೆ ದಾಳಿ ನಡೆಸಿದ ನಂತರ, “ಸಂಪೂರ್ಣವಾಗಿ ಅನುಚಿತ” ರೀತಿಯಲ್ಲಿ ವರ್ತಿಸಿದೆ ಎಂದು ಹೇಳಿದೆ.
ಮಹಿಳೆಯರಿಬ್ಬರು ಆಶ್ರಮಕ್ಕೆ ಸೇರಿದಾಗ 27 ಮತ್ತು 24 ವರ್ಷದವರಾಗಿದ್ದರು. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ ಎನ್ನಲಾಗಿದೆ. ಹೈಕೋರ್ಟ್ ಆದೇಶದ ನಂತರ ನೂರಾರು ಪೊಲೀಸರು ಇಶಾ ಫೌಂಡೇಶನ್ ಮೇಲೆ ದಾಳಿ ನಡೆಸಿದ್ದರು. ಪೊಲೀಸ್ ವಿಚಾರಣೆಯ ವಿರುದ್ಧ ಇಶಾ ಫೌಂಡೇಶನ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಗಳನ್ನು ಪ್ರಶ್ನೆ ಮಾಡಿತ್ತು.
ಇಶಾ ಫೌಂಡೇಶನ್ ಆಗಲೂ ಆ ಆರೋಪಗಳನ್ನ ನಿರಾಕರಿಸಿತ್ತು. ಮಹಿಳೆಯರಿಗೆ 42 ಮತ್ತು 39. ಅವರು ಅಲ್ಲಿಯ ನಿವಾಸಿಗಳು ಎಂದು ಹೇಳಿದ್ದು, ಆ ಮಹಿಳೆಯರು ಹೈಕೋರ್ಟ್‌ನ ಮುಂದೆ ಹಾಜರಾಗಿ ಫೌಂಡೇಶನ್‌ನ ಹೇಳಿಕೆಯನ್ನು ದೃಢಪಡಿಸಿದ್ದರು. ತಮ್ಮ ಸಹೋದರಿ ಮತ್ತು ತಾನು ಇಲ್ಲಿಯ ನಿವಾಸಿಗಳಾಗಿದ್ದು, ಅವರ ತಂದೆ ಎಂಟು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದರು. ತಾಯಿಯೂ ಇದೇ ರೀತಿ ಕಿರುಕುಳ ನೀಡಿದ್ದರು ಎಂದು ಅವರು ಆರೋಪಿಸಿದ್ದರು.
ಇಶಾ ಫೌಂಡೇಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಮಹಿಳೆಯರು ಸ್ವಯಂಪ್ರೇರಣೆಯಿಂದ ಆಶ್ರಮದಲ್ಲಿ ವಾಸವಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ತಮ್ಮ ಬೆಳೆದ ಮಕ್ಕಳ ಬದುಕನ್ನು “ನಿಯಂತ್ರಿಸಲು” ಸಾಧ್ಯವಿಲ್ಲ ಎಂದು ವಾದಿಸಿದ್ದರು.