ಎಚ್ ಪಿಝಡ್ ಆ್ಯಪ್ ಹಗರಣದಲ್ಲಿ ಇಡಿ ವಿಚಾರಣೆ ಎದುರಿಸಿರುವ ನಟಿ ತಮನ್ನಾ ಭಾಟಿಯಾ ದೇವರ ಮೊರೆ ಹೋಗಿದ್ದಾರೆ.
ಆಪ್ ಹಗರಣದಲ್ಲಿ ತಮನ್ನಾ ಭಾಟಿಯಾ ಹೆಸರು ತಳಕು ಹಾಕಿಕೊಂಡಿದೆ. ಆದರೆ, ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಆರೋಪಿಯಾಗಿ ವಿಚಾರಣೆ ನಡೆಸಿಲ್ಲ. ಬದಲಿಗೆ, ಅವರು ಈ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ತನಿಖೆ ಎದುರಿಸುವಂತಾಗಿದೆ. ಈ ಬೆನ್ನಲ್ಲೇ ಅವರು ದೇವಾಲಯಕ್ಕೆ ಭೇಟಿ ನೀಡಿ, ದೇವರಲ್ಲಿ ಕಷ್ಟ ದೂರ ಮಾಡುವಂತೆ ಪ್ರಾರ್ಥಿಸಿದ್ದಾರೆ. ತಮನ್ನಾ ವಿಚಾರಣೆ ಬಳಿಕ ಅವರು ಗುವಾಹಟಿಯ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ನಟಿ ತಮನ್ನಾ ಭಾಟಿಯಾ ಅವರನ್ನು ಈಗಾಗಲೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.