ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಪ್ರಭಾಸ್ ನಟನೆಯ ಮೂರು ಸಿನಿಮಾಗಳು ಏಕಕಾಲಕ್ಕೆ ಮರು ಬಿಡುಗಡೆ ಆಗುತ್ತಿವೆ. ಪ್ರಭಾಸ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರು ನಟಿಸಿರುವ ಮೂರು ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಅಕ್ಟೋಬರ್ 23 ರಂದು ಪ್ರಭಾಸ್ ಹುಟ್ಟು ಹಬ್ಬವಿದೆ. ಅಕ್ಟೋಬರ್ 19 ರಂದು ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಒಂದು ವರ್ಷ ಕಳೆಯುವ ಮುನ್ನವೇ ಮರು ಬಿಡುಗಡೆ ಆಗುತ್ತಿದೆ.
ಅಕ್ಟೋಬರ್ 22 ರಂದು ‘ಮಿಸ್ಟರ್ ಪರ್ಫೆಕ್ಟ್’ ಸಿನಿಮಾ ಮರು ಬಿಡುಗಡೆ ಆಗಲಿದೆ. ಇದು 2011 ರಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಕಾಜೊಲ್, ತಾಪ್ಸಿ ಪನ್ನು, ಪ್ರಕಾಶ್ ರೈ ಸೇರಿದಂತೆ ಹಲವರು ನಟಿಸಿದ್ದರು. ಅಕ್ಟೋಬರ್ 23 ಕ್ಕೆ ಪ್ರಭಾಸ್ ನಟನೆಯ ಮೊಟ್ಟ ಮೊದಲ ಸಿನಿಮಾ ‘ಈಶ್ವರ್’ ಬಿಡುಗಡೆ ಆಗಲಿದೆ. 2002 ರಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಈ ಸುದ್ದಿ ಕೇಳಿ ಅಭಿಮಾನಿಗಳು ತುಂಬಾ ಸಂತಸ ಪಡುತ್ತಿದ್ದಾರೆ.