ಚಿತ್ರದುರ್ಗದ ರುಡ್ ಸೆಟ್ ಸಂಸ್ಥೆ ವತಿಯಿಂದ ಇದೇ ನವೆಂಬರ್ 1 ರಿಂದ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಟಿವಿ ಟೆಕ್ನಿಷಿಯನ್ ಗೆ 30 ದಿನಗಳ ತರಬೇತಿ ನೀಡಲಾಗುತ್ತದೆ. ಅದರಂತೆ, ಫಾಸ್ಟ್ ಫುಡ್ ಸ್ಟಾಲ್ ಉದ್ಯಮ 10 ದಿನ, ವಾಣಿಜ್ಯ ಹೂ ಕೃಷಿ ತರಬೇತಿ 10 ದಿನ, ಕೃತಕ ಆಭರಣಗಳ ತಯಾರಿಕೆ 13 ದಿನ, ಪ್ಲಂಬಿಂಗ್ ಸ್ಯಾನಿಟರಿ ಕೆಲಸ 30 ದಿನ, ಸಣ್ಣ ಉದ್ದಮೆದಾರರಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ 13 ದಿನ, ಬ್ಯೂಟಿಪಾರ್ಲರ್ ನಿರ್ವಹಣೆ(ಮಹಿಳೆಯರಿಗೆ) 30 ದಿನ, ಮಹಿಳಾ ಟೈಲರ್(ಮಹಿಳೆಯರಿಗೆ) 30 ದಿನ, ಕಂಪ್ಯೂಟರೈಸಡ್ಸ್ ಅಕೌಂಟಿಂಗ್ 30 ದಿನ, ದ್ವಿ ಚಕ್ರ ವಾಹನ ರಿಪೇರಿ 30 ದಿನಗಳ ತರಬೇತಿ ನೀಡಲಾಗುತ್ತಿದೆ.

ಆಸಕ್ತರು 18 ರಿಂದ 45 ವರ್ಷ ವಯಸ್ಸಿನೊಳಗಿರಬೇಕು. ಕನಿಷ್ಠ 8ನೇ ತರಗತಿಯವರೆಗೆ ಓದಿರಬೇಕು. ಗ್ರಾಮೀಣ ಪ್ರದೇಶದ ಆಸಕ್ತ ನಿರುದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಆಸಕ್ತರು ಅಕ್ಟೋಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಅರ್ಜಿಗಳನ್ನು www.rudsetitraining.org ಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ನಂ. 9481778047, 9019299901, 8660627785, 8618282445ಗೆ ಸಂಪರ್ಕಿಸಲು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.