ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಬಿಜಾಪುರದಲ್ಲಿ ನಾಳೆ (ನ.15) ವಕ್ಫ್ ಬೋರ್ಡ್ ವಿರುದ್ಧ ಕರೆಯಲಾಗಿರುವ “ವಕ್ಫ್ ಹಠಾವೋ, ದೇಶ್ ಬಚಾವೋ” ಪ್ರತಿಭಟನೆ ವಿರೋಧಿಸಿ ಇಂದು ಮಾಧ್ಯಮದೆದರು ಮುಸ್ಲಿಂ ಮುಖಂಡರು ಬಂದು ಯತ್ನಾಳ್ ವಿರುದ್ಧ ಹರಿಹಾಯ್ದರು.
ಎಸ್ ಎಸ್ ಖಾದ್ರಿ ಈ ಬಗ್ಗೆ ಮಾತಾಡಿ, ‘ಮುಚ್ಕೊಂಡು ರಾಜಕೀಯ ಮಾಡಿ ಇಲ್ಲವಾದರೇ ನವೆಂಬರ್ ಆರಕ್ಕೆ(6) ನಿಮ್ಮ ಸಿಡಿ ಬಿಡುಗಡೆ ಫಿಕ್ಸ್ ಎಂದು ಎಚ್ಚರಿಸಿ ಹರಿಹಾಯ್ದರು.
ಇತ್ತ ನಾಳಿನ ಪ್ರತಿಭಟನೆಯಲ್ಲಿ ಯತ್ನಾಳ್ ಜೊತೆ, ಸಿಟಿ ರವಿ, ಚಕ್ರವರ್ತಿ ಸೂಲಿಬೆಲೆ ಹಾಗೂ ಸಾವಿರಾರು ಸಂಖ್ಯೆಯ ನಿರೀಕ್ಷಿತ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡೆಯಲಿದ್ದು, ಸಂಘ-ಸಂಸ್ಥೆ, ದೇವಸ್ಥಾನ, ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿಯಾಗಿ ವಶಕ್ಕೆ ಪಡೆಯುವ ದುಷ್ಟ ಕಾನೂನನ್ನು ಕೈ ಬಿಡುವಂತೆ ಉಗ್ರ ಹೋರಾಟನಡೆಸುವ ಯೋಜನೆ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಪ್ರತಿಭಟನೆಯ ಹೆಸರಲ್ಲಿ ನಾಳೆ ಬಿಜಾಪುರ ಜಿಲ್ಲೆಯು ಬಿಸಿಯಾಗೋದು ಮಾತ್ರ ಕನ್ಫರ್ಮ್!.