ವಾಲ್ಮೀಕಿ ಹಗರಣದಲ್ಲಿ ಅಂದರ್ ಆಗಿದ್ದ ಮಾಜಿ ಸಚಿವ ಬಿ. ನಾಗೇಂದ್ರಗೆ ಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲಿಗೆ ಹಗರಣದ ಸುಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ನಾಗೇಂದ್ರಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಬೆಂಗಳೂರಿನ 82ನೇ ಸಿಟಿ ಸಿವಿಲ್ ಕೋರ್ಟ್ ಮೂಲಕ ಜಾಮೀನು ಮಂಜೂರಾಗಿದ್ದು, ಕಳೆದ ಮೂರು ತಿಂಗಳ ಸೆರೆವಾಸಕ್ಕೆ ಮುಕ್ತಿ ಸಿಕ್ಕಿದೆ. ವಾಲ್ಮೀಕಿ ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಹಣ ಅಕ್ರಮ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ನಾಗೇಂದ್ರರನ್ನು ಬಂಧಿಸಿ, ವಿಚಾರಣೆಯ ನಂತರದಲ್ಲಿ ಕೋರ್ಟ ಸೂಚನೆಯಂತೆ ಜೈಲಿಗೆ ಬಿಟ್ಟಿತ್ತು. ನಂತರದಲ್ಲಿ ಆತ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇತ್ತೀಚೆಗೆ ಈ ಕೇಸಿಗೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ, ಪರಿಶೀಲನೆಯ ನಂತರದಲ್ಲಿ ಕೋರ್ಟಿಗೆ ನಾಗೇಂದ್ರ ಸೇರಿದಂತೆ ಇತರೆ ಆರೋಪಿಗಳೆಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದೀಗ ಇಂದು ನಾಗೇಂದ್ರಗೆ ಸಿಟಿ ಸಿವಿಲ್ ಕೋರ್ಟ್ ಜಾಮೀನು ನೀಡಿದೆ.