
ಬೆಂಗಳೂರಿನ ಯಲಹಂಕದ ಸಿಂಗನಾಯಕನ ಹಳ್ಳಿಯಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸಿಂಗನಾಯಕನಹಳ್ಳಿಯಲ್ಲಿ ವಾಸವಿದ್ದ ದಂಪತಿಗಳಿಬ್ಬರು ತಮ್ಮ ಮಕ್ಕಳಿಬ್ಬರೊಂದಿಗೆ ಇಹಲೋಕ ತ್ಯೆಜಿಸಿದ್ದು, ಕಂಡವರ ಕರುಳು ಕಿವುಚಿತ್ತಿದೆ. ಅವಿನಾಶ್(33), ಮಮತಾ(30) ದಂಪತಿಗಳು ತಮ್ಮ ಮಕ್ಕಳಾದ ಐದು ವರ್ಷದ ಅಧೀರ ಹಾಗೂ ಮೂರು ವರ್ಷದ ಅಣ್ಣಯ್ಯ ಎಂಬ ಹಸುಗೂಸಿನೊಂದಿಗೆ ಆತ್ಮಹತ್ಯೆಗೀಡಾಗಿದ್ದಾರೆ.
ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸದ್ಯ ದುರಂತದ ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ.