ರಾಜಾಸಾಬ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ಪ್ರಭಾಸ್ ಏಕಾ-ಏಕಿ ನಿರ್ದೇಶಕ, ನಿರ್ಮಾಪಕರಿಗೆ ಕಟ್ಟು ನಿಟ್ಟಿನ ಗಡುವು ನಿಗಧಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಈಗಿನ ಸಿನಿಮಾಗಳು ಮೂರ್ನಾಲ್ಕು ವರ್ಷ ತೆಗೆದುಕೊಳ್ಳುತ್ತಿರುವ ಈ ಹೊತ್ತಲ್ಲಿಪ್ರಭಾಸ್ ತೆಗೆದುಕೊಂಡ ನಿರ್ಧಾರ ಸಖತ್ ಸದ್ದು ಮಾಡತೊಡಗಿದೆ.
ಹೌದು, ಪ್ರಭಾಸ್ ಇನ್ನು ಮುಂದೆ ತಮ್ಮ ಬಳಿ ಬರುವ ನಿರ್ದೇಶಕ, ನಿರ್ಮಾಪಕರಿಗೆ ಕೇವಲ 90 ದಿನಗಳ ಒಳಗಾಗಿ ಚಿತ್ರೀಕರಣ ಮುಗಿಸಿಕೊಳ್ಳುವ ಶರತ್ತು ಹಾಕಿದ್ದಾರೆ. ಅದಲ್ಲದೇ, ಚಿತ್ರೀಕರಣ ಪ್ರಾರಂಭಗೊಂಡ ಆರು ತಿಂಗಳಲ್ಲಿಬಿಡುಗಡೆಗೊಳಿಸಬೇಕು ಎಂದು ಕಟ್ಟು ನಿಟ್ಟಿನ ಗಡುವು ಕೊಡಲಿದ್ದಾರಂತೆ.

ಹೀಗಾದರೇ ಹೇಗೆ ಎಂಬ ಚಿಂತೆ ನಿರ್ಮಾಪಕ, ನಿರ್ದೇಶಕರಿಗಾದರೇ, ವರ್ಷಕ್ಕೆರಡು ಸಿನಿಮಾ ನೋಡ ಬಹುದು ಎಂಬ ಖುಷಿ ಅಭಿಮಾನಿಗಳದ್ದು. ವಾಸ್ತವದಲ್ಲಿ ಅದು ಸಾಧ್ಯವಿಲ್ಲ ಎಂಬುದು ಸ್ಪಷ್ಟ! ಕಾರಣ, ಪ್ರಭಾಸ್ ಸಿನಿಮಾ ಚಿತ್ರವೆಂದರೇ ಅಲ್ಲೊಂದು ಅದ್ಧೂರಿ ವೆಚ್ಚ ಇದ್ದೇ ಇರುತ್ತೆ. ಅದರ ತಯಾರಿಯೂ ಹಾಗೆಯೇ ಸಮಯ ಕೇಳಲಿದೆ. ಕಲಾವಿದರ ಹೊಂದಿಕೆ, ಲೊಕೇಶನ್, ಸೆಟ್ ಎಲ್ಲವೂ ದಿನ ಹಿಡಿಯುತ್ತವೆ. ಅಂಥದ್ದರಲ್ಲಿ ಪ್ರಭಾಸ್ ತೊಂಬತ್ತು ದಿನಗಳ ಚಿತ್ರೀಕರಣ, ಆರು ತಿಂಗಳಲ್ಲಿ ಚಿತ್ರ ಬಿಡುಗಡೆಯ ಲೆಕ್ಕಾಚಾರ ಹೇಗೆ ವರ್ಕೌಟ್ ಆಗಲಿದೆ ಕಾದು ನೋಡೋಣ. ಆದರೇ, ಈ ನಿರ್ಧಾರದಿಂದ ಪ್ರಭಾಸ್ ಸಿನಿಮಾಗಳು ಸ್ವಲ್ಪ ಬೇಗ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗೋದು ಮಾತ್ರ ಪಕ್ಕಾ!.