ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನು ಅರ್ಜಿಯ ವಾದ-ವಿವಾದ ಮುಕ್ತಾಯವಾಗಿದೆ. ಅ. 14ಕ್ಕೆ ತೀರ್ಪು ಪ್ರಕಟಿಸುವುದಾಗಿ ಕೋರ್ಟ್ ಆದೇಶ ನೀಡಿದೆ.
ಅರ್ಜಿಯ ವಿಚಾರಣೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದಿದ್ದು, ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಹಾಗೂ ಎಸ್ ಪಿಪಿ ಪ್ರಸನ್ನ ಕುಮಾರ್ ನಡುವೆ ವಾದ- ಪ್ರತಿವಾದ ನಡೆಯಿತು. ಇಬ್ಬರೂ ವಕೀಲರು ಕಟುವಾದ ವಾದ ಸರಣಿ ನಡೆಸಿದರು. ಇಬ್ಬರೂ ವಕೀಲರು ತಮ್ಮ ವಾದಗಳನ್ನು ಅಂತ್ಯಗೊಳಿಸಿದ್ದು, ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 14ಕ್ಕೆ ಪ್ರಕಟಿಸುವುದಾಗಿ ಹೇಳಿದ್ದಾರೆ.
ಅಕ್ಟೋಬರ್ 14 ರಂದು ಎ2 ಆರೋಪಿ ದರ್ಶನ್ ಗೆ ಜಾಮೀನು ಸಿಗುವ ಕುರಿತು ಸ್ಪಷ್ಟ ವಿಷಯ ತಿಳಿಯಲಿದೆ. ಅಲ್ಲದೇ, ಅಂದೇ ಎ1 ಆರೋಪಿ ಪವಿತ್ರಾ ಗೌಡ, ಎ8 ರವಿಶಂಕರ್, ಎ8, ಎ11, ಎ12 ಹಾಗೂ ಎ13 ಅವರ ಜಾಮೀನು ಅರ್ಜಿಯ ಆದೇಶವೂ ಹೊರ ಬರಲಿದೆ. ಎ13 ದೀಪಕ್ ಗೆ ಜಾಮೀನು ಸಿಗುವ ವಿಷಯವಾಗಿ ಎಸ್ ಪಿಪಿ ಯಾವುದೇ ತಕಾರರು ಎತ್ತಿಲ್ಲ. ಹೀಗಾಗಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಖಚಿತ ಎನ್ನಲಾಗುತ್ತಿದೆ. ಆದರೆ, ಇನ್ನುಳಿದವರ ಜಾಮೀನು ವಿಷಯ ಕೋರ್ಟ್ ಅಂಗಳದಲ್ಲಿದೆ.