ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಉತ್ತಮ “ಸ್ನೇಹಿತ” ಮತ್ತು “ಒಳ್ಳೆಯ ಮನುಷ್ಯ” ಎಂದು ಹಾಡಿ ಹೊಗಳಿದ್ದಾರೆ.
ಫ್ಲಾಗ್ರಾಂಟ್ ಪಾಡ್‌ಕ್ಯಾಸ್ಟ್ನಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, “ಭಾರತದ ಮೋದಿ ನನ್ನ ಸ್ನೇಹಿತ ಮತ್ತು ಒಳ್ಳೆಯ ಮನುಷ್ಯ. ಅವರು ಪ್ರಧಾನಿಯಾಗಿ ನೇಮಕಗೊಳ್ಳುವ ಮೊದಲು ಭಾರತವು ತುಂಬಾ ಅಸ್ಥಿರವಾಗಿತ್ತು. ಅವರು ಉತ್ತಮ ಮನುಷ್ಯ” ಎಂದು ಹೊಗಳಿದ್ದಾರೆ.
2019ರಲ್ಲಿ ಅಮೆರಿಕದ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಮೆಗಾ ಕಾರ್ಯಕ್ರಮವನ್ನು ಟ್ರಂಪ್ ನೆನಪಿಸಿಕೊಂಡುರು. ಅಲ್ಲಿ 80 ಸಾವಿರ ಭಾರತೀಯರು ಸೇರಿದ್ದರು. ಇಂದಿಗೂ ನಾವಿಬ್ಬರೂ ಉತ್ತಮ ಸಂಬಂಧವನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.