ಕಾರ್ಕಳ: ದಸರಾ ಎಕ್ಸೆಚೇಂಜ್ ಮತ್ತು ಫೈನಾನ್ಸ್ ಉತ್ಸವದ ಹಿನ್ನೆಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಆಫರ್ ನೀಡಲಾಗಿದೆ. ಗ್ರಾಹಕರು ಕಡಿಮೆ ಬಡ್ಡಿ ದರದಲ್ಲಿ ತಮ್ಮ ನೆಚ್ಚಿನ ಕಾರು ಖರೀದಿಸಬಹುದು. ಈ ಮೇಳ ಕಾರ್ಕಳದಲ್ಲಿ ಒಂದು ವಾರಗಳ ಕಾಲ ನಡೆಯುತ್ತಿದೆ.
ಅಲ್ಲದೇ, ಈ ಮೇಳದಲ್ಲಿ ಹಳೆ ವಾಹನ ಬದಲಾವಣೆಗೆ ಉತ್ತಮ ಬೆಲೆ ನೀಡಲಾಗುತ್ತದೆ. ಶೇ. 100ರಷ್ಟು ಆನ್ ರೋಡ್ ಫಂಡಿಂಗ್, ಕಡಿಮೆ ನಗದು ಪಾವತಿ ಜೊತೆಗೆ ಝೀರೋ ಡೌನ್ ಪೇಮೆಂಟ್ ನಲ್ಲಿ ತಮ್ಮ ಕನಸಿನ ಕಾರನ್ನು ಖರೀದಿಸಲು ಅವಕಾಶ ನೀಡಲಾಗಿದೆ.
ಹೈರೈಡರ್ ಕಾರು ಮತ್ತು ಫಾರ್ಚುನರ್ ಕಾರುಗಳ ಮೇಲೆ ಒಂದು ಲಕ್ಷ ರೂ. ವರೆಗೆ ಡಿಸ್ಕೌಂಟ್ ಆಫರ್ ಕೂಡ ನೀಡಲಾಗಿದೆ. ಹೀಗಾಗಿ ಕಾರು ಪ್ರಿಯರು ನವರಾತ್ರಿಯ ಶುಭ ಸಮಾರಂಭದಲ್ಲಿ ತಮ್ಮ ನೆಚ್ಚಿನ ಕಾರನ್ನು ಖರೀದಿಸಿ ಮನೆಗೆ ಕೊಂಡೊಯ್ಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಈ ವೇಳೆ ಯುನಿಟೆಡ್ ಟೋಯೊಟ ಸೇಲ್ಸ್ ಆಫೀಸರ್ ಕಿಶೋರ್ ದೇವಾಡಿಗ ಮಾತನಾಡಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ದಸರಾ ಎಕ್ಸೆಚೇಂಜ್ ಮತ್ತು ಫೈನಾನ್ಸ್ ಉತ್ಸವ ನಡೆಯುತ್ತಿದೆ. ಪೇಮೆಂಟ್ ನಲ್ಲಿ ಕಾರು ಖರೀದಿಸ ಬಹುದಾಗಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡುವ ಕಾರುಗಳಿಗೆ ಆಕರ್ಷಕ ಬಡ್ಡಿದರ ನಿಡಲಾಗುವುದು. ತಮ್ಮ ಹಳೆ ಕಾರನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ, ತಮ್ಮ ನೆಚ್ಚಿನ ಕಾರನ್ನು ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.

ಮಾರ್ಕೆಟಿಂಗ್ ಆಫೀಸರ್ ಯಜ್ಞೇಶ್ ದೇವಾಡಿಗ ಮಾತನಾಡಿ, ದಸರಾ ಎಕ್ಸೆಚೇಂಜ್ ಮತ್ತು ಫೈನಾನ್ಸ್ ಮೇಳ ಒಂದು ವಾರಗಳ ಕಾಲ ಕಾರ್ಕಳದಲ್ಲಿ ನಡೆಯಲಿದೆ. ದಸರಾ ಉತ್ಸವದ ಅಂಗವಾಗಿ ಹೊಸ ಕಾರು ಖರೀದಿಸುವವರಿಗೆ ಮತ್ತು ಹಳೆ ಕಾರು ಎಕ್ಸೆಚೇಂಜ್ ಮಾಡುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.
ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಆನಂದ ಕುಮಾರ್ ಮಾತನಾಡಿ, ಟೊಯೋಟಾ ಕಂಪನಿ ಮತ್ತು ಎಸ್ ಬಿಐ ಬ್ಯಾಂಕ್ ವತಿಯಿಂದ ಕಾರು ಫೈನಾನ್ಸ್ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಯಾವುದೇ ಸಂಸ್ಥೆಯ ಕಾರನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ, ಹೊಸ ಕಾರನ್ನು ಖರೀದಿಸಬಹುದು. ಯಾವುದೇ ರೀತಿಯ ಪೇಪರ್ ಚಾರ್ಜ್ ಇಲ್ಲದೆ ತಮ್ಮ ಮನಸಿಗೆ ಇಚ್ಛಿಸಿದ ಕಾರನ್ನು ಗ್ರಾಹಕರು ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು ಎಂದಿದ್ದಾರೆ. ಈ ವೇಳೆ ಡಿ.ಆರ್ ರಾಜು ಕಾರ್ಕಳ, ಪಿಡಬ್ಲ್ಯೂಡಿ ಕನ್ ಸ್ಟ್ರಕ್ಷನ್ ಅರುಣ್ ಕುಮಾರ್ ಕಾರ್ಕಳ, ಅವಿನಾಶ್ ಜಿ ಸೇರಿದಂತೆ ಹಲವರು ಇದ್ದರು.