ನವದೆಹಲಿ: ಟಿಬಿ ವಾರಿಯರ್ ಗಳನ್ನು ಬಲಪಡಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ನಿ-ಕ್ಷಯ್ ಪೋಷಣ್ ಯೋಜನೆಯಡಿ ಚಿಕಿತ್ಸೆಯ ಅವಧಿಯಲ್ಲಿ ಎಲ್ಲ ಟಿಬಿ ರೋಗಿಗಳಿಗೆ ಮಾಸಿಕ ಪೌಷ್ಟಿಕಾಂಶದ ಬೆಂಬಲವನ್ನು ತಿಂಗಳಿಗೆ 500 ರೂ.ನಿಂದ 1 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತವು ಟಿಬಿ ಮುಕ್ತ ಭಾರತ ನಿರ್ಮಾಣದಲ್ಲಿ ದೃಢವಾಗಿದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಟಿಬಿ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲವಾಗಿ ನಿಕ್ಷಯ ಪೋಷಣ್ ಯೋಜನೆಯಡಿ 1040 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆಯನ್ನು ಅನುಮೋದಿಸಲಾಗಿದೆ. ಯೋಜನೆಯಡಿ ನೇರ ಲಾಭ ವರ್ಗಾವಣೆ ಮೂಲಕ 1.13 ಕೋಟಿ ಫಲಾನುಭವಿಗಳಿಗೆ 3,202 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.