ಬೆಂಗಳೂರು | ರಾಜ್ಯದ ಜನತೆ 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಅದ್ಧೂರಿಯಾಗಿ ವೆಲ್ಕಂ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು.

ಹೊಸ ವರ್ಷವನ್ನು ಸಿಲಿಕಾನ್ ಸಿಟಿ ಮಂದಿಯಂತೂ ಸಂಭ್ರಮ, ಸಡಗರದೊಂದಿಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಪಾರ್ಟಿ ಮಾಡುವ ಮೂಲಕ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇನ್ನೊಂದೆಡೆ ಹೊಸ ವರ್ಷ ಆಚರಣೆ ಹಿನ್ನಲೆ ಕೇವಲ ಒಂದೇ ರಾತ್ರಿಗೆ ನಗರದಲ್ಲಿ 9 ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಇದನ್ನು ಜಿಬಿಎ ಪೌರ ಕಾರ್ಮಿಕರು ಕೇವಲ 5 ಗಂಟೆಗಳಲ್ಲಿ ಕ್ಲಿಯರ್ ಮಾಡಿ ನಗರವನ್ನು ಸ್ವಚ್ಛಗೊಳಿಸಿದ್ದಾರೆ.

ಮದ್ಯದ ಬಾಟಲ್‌ಗಳು, ಚಪ್ಪಲ್‌ಗಳು, ಶೂಗಳು, ಬಟ್ಟೆಗಳು, ಊಟ, ತಿಂಡಿ-ತಿನಿಸುಗಳ ಪ್ಲೇಟ್, ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟ್ ತ್ಯಾಜ್ಯ ವಿಲೇವಾರಿ ಮಾಡಲಾಗಿದ್ದು, 110 ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ಭಾಗಿಯಾಗಿದ್ದರು.

ಕಸ ಕ್ಲಿನ್ ಮಾಡಲು 10 ಆಟೋ, ಟಿಪ್ಪರ್, 3 ಪ್ರೆಷರ್ ವಾಟರ್ ಜೆಟ್ ಬಳಕೆ ಮಾಡಲಾಗಿದ್ದು, ಪೌರ ಕಾರ್ಮಿಕರು ಬೆಳಗಿನ ಜಾವ 3 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೂ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಸದ್ಯ ಜಿಬಿಎ ಪೌರ ಕಾರ್ಮಿಕರ ಕಾರ್ಯಕ್ಕೆ ಸರ್ವಾಜನಿಕರಿಂದ ಭಾರೀ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : 2012 ಪುಣೆ ಬಾಂಬ್ ಸ್ಫೋಟದ ಆರೋಪಿಗೆ ಗುಂಡೇಟು | ನಡುರಸ್ತೆಯಲ್ಲೇ ಹತ್ಯೆ!



















