ನೌಕರರ ಪಿಎಫ್ 3155 ಕೋಟಿ, ಶಕ್ತಿಯೋಜನೆ ಅನುದಾನ 2,850 ಕೋಟಿ ರೂ., 38 ತಿಂಗಳ ಅರಿಯರ್ಸ್ 3100 ಕೋಟಿ ರೂ. ಹಣ ನಾಲ್ಕು ಸಾರಿಗೆ ನಿಗಮಗಳ ಇಲಾಖೆಗೆ ಅನುದಾನ ಬರಬೇಕಿದೆ ಎಂಬ ಮಾಹಿತಿ ಈಗ ಅಧಿಕೃತವಾಗಿ ಲಭ್ಯವಾಗಿದೆ.
ಸರ್ಕಾರದಿಂದ ನಿಗಮಗಳಿಗೆ ಸುಮಾರು 9 ಸಾವಿರ ಕೋಟಿ ರೂ. ಹಣ, ನಿವೃತ್ತ ನೌಕರರಿಗೆ ಇನ್ನೂ ಗ್ರ್ಯಾಚ್ಯುಟಿ ಹಣ ಇನ್ನೂ ಬಂದಿಲ್ಲ ಎನ್ನುವ ಮಾಹಿತಿ ಇದೆ. 2023 ರಿಂದ ನಿವೃತ್ತ ನೌಕರರಿಗೂ ಗ್ರ್ಯಾಚ್ಯುಟಿ ಲಭ್ಯವಾಗಿಲ್ಲ. 250 ಕೋಟಿ ರೂ. ಗ್ರ್ಯಾಚ್ಯುಟಿ ಹಣ ನೀಡಿಲ್ಲ ಎಂದು ಸಾರಿಗೆ ಇಲಾಖೆಯ ನೌಕರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ನಾಲ್ಕು ರಾಜ್ಯ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ನೀಡಬೇಕಿರುವ ಅನುದಾನ ಮೊದಲು ನೀಡುವಂತೆ ಹೆಸರು ಹೇಳಲು ಇಚ್ಚಿಸದ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.