ಮಂಡ್ಯ : ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂನಿಂದ ನದಿಗೆ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಇದರಿಂದ ನದಿ ಪಾತ್ರದ ಜನರಿಗೆ ಪ್ರವಾದ ಬೀತಿ ಎದುರಾಗಿದೆ. ಶ್ರೀರಂಗಪಟ್ಟಣದಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ನದಿ ಪಕ್ಕದ ಜಮೀನು, ಪ್ರವಾಸಿ ತಾಣ, ದೇಗುಲಗಳು ಜಲಾವೃತವಾಗಿವೆ.
ನದಿ ಪಾತ್ರದ ಬಲಮುರಿ, ರಂಗನತಿಟ್ಟು, ಸ್ನಾನಘಟ್ಟ, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಅಪಾಯದಲ್ಲಿ ಪಕ್ಷಿ ಸಂಕುಲವಿದೆ. ನಿಮಿಷಾಂಭ ದೇಗುಲದ ಬಳಿ ನದಿ ಬಳಿ ಭಕ್ತರು ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದೆ. ಪಟ್ಟಣದಲ್ಲಿ ವೆಲ್ಲೆಸ್ಲಿ ಸೇತುವೆ ಮೇಲೆ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದು, ನದಿಪಾತ್ರದಲ್ಲಿ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇದಲ್ಲದೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಮತ್ತಷ್ಟು ನೀರು ಬಿಡುಗಡೆ ಸಾಧ್ಯತೆಯಿದೆ.