ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು 83 ಸಾವಿರ ಕೋಟಿ ರೂ. ಗೂ ಅಧಿಕ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದಾರೆ.
ಸುಮಾರು 80 ಸಾವಿರ ಕೋಟಿ ರೂ. ವೆಚ್ಚದಲ್ಲಿ ಧರ್ತಿ ಆಬ ಜಂಜಾಟಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಯೋಜನೆ 63 ಸಾವಿರಕ್ಕೂ ಅಧಿಕ ಬುಡಕಟ್ಟು ಜನರಿರುವ ಹಳ್ಳಿಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ. 5 ಕೋಟಿ ರೂ.ಗೂ ಅಧಿಕ ಜನರಿಗೆ ಪ್ರಯೋಜನ ನೀಡುತ್ತದೆ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಸುಮಾರು 80 ಸಾವಿರ ಕೋಟಿ ರೂ. ಧರ್ತಿ ಆಬ ಜಂಜಾಟಿಯ ಗ್ರಾಮ ಉತ್ಕರ್ಷ್ ಅಭಿಯಾನ ಉದ್ಘಾಟಿಸಿದೆ. ಈ ಯೋಜನೆಯು ಸುಮಾರು 63 ಸಾವಿರ ಬುಡಕಟ್ಟು ಹಳ್ಳಿಗಳ ಅಭಿವೃದ್ಧಿಗೆ ಒಳಪಡುತ್ತದೆ. ಇದು 5 ಕೋಟಿ ರೂ.ಗೂ ಅಧಿಕ ಜನರಿಗೆ ಪ್ರಯೋಜನ ನೀಡುತ್ತದೆ. ಈ ಯೋಜನೆಯು ಭಗವಾನ್ ಬಿರ್ಸಾ ಮುಂಡಾ ಭೂಮಿಯಿಂದ ಪ್ರಾರಂಭವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.
ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಲು ಶ್ರಮಿಸುತ್ತಿದೆ. 40 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (ಇಎಂಆರ್ಎಸ್) ಉದ್ಘಾಟಿಸಲಾಗುತ್ತಿದೆ. 25 ಇಎಂಆರ್ಎಸ್ಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಪ್ರಧಾನಿ ಆವಾಸ್ ಯೋಜನೆ ಅಡಿಯಲ್ಲಿ ಜಾರ್ಖಂಡ್ನ ಸಾವಿರಾರು ಬಡವರು ತಮ್ಮದೇ ಆದ ಪಕ್ಕಾ ಮನೆಯನ್ನು ಪಡೆದುಕೊಂಡಿದ್ದಾರೆ. ಜಾರ್ಖಂಡ್ನಲ್ಲಿ ಇಂದು 80 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗಿದೆ. ಈ ಯೋಜನೆಗಳು ಬುಡಕಟ್ಟು ಸಮಾಜದ ಕಲ್ಯಾಣ ಮತ್ತು ಉನ್ನತಿಗೆ ಸಂಬಂಧಿಸಿದೆ ಎಂದಿದ್ದಾರೆ.