ಪ್ರಯಾಗರಾಜ್: ಮುಂದಿನ ತಿಂಗಳಿನಿಂದ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭ ಮೇಳ ನಡೆಯಲಿದೆ. ಹೀಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕುಂಭ ಮೇಳಕ್ಕೆ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗುತ್ತದೆ. ನಿಯೋಜನೆ ಕಾರ್ಯ ಅ. 25ರಿಂದ ಆರಂಭವಾಗಿದೆ. ಈ ಪೈಕಿ 1,200 ಜನ ಸಿಬ್ಬಂದಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 700 ಪೊಲೀಸರು ಒಂದೇ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಅವರ ಪತ್ನಿಯ ಹೆರಿಗೆ ಅಥವಾ ಅನಾರೋಗ್ಯದ ಕಾರಣ ನೀಡಿ ರಜೆ ಕೇಳಿದ್ದಾರೆ. ಕೆಲವರು ಜನವರಿಯಲ್ಲಿ ಪತ್ನಿಗೆ ಹೆರಿಗೆಯಾಗಲಿದೆ ಎಂದು ಕಾರಣ ನೀಡಿ ರಜೆ ಕೇಳಿದ್ದಾರೆ.
ಈ ಮನವಿ ಕಂಡು ಪೊಲೀಸ್ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಪೊಲೀಸರಲ್ಲಿ ಹೆಚ್ಚಿನವರು 2018 ಮತ್ತು 2023ರಲ್ಲಿ ನೇಮಕಗೊಂಡ ಕಾನ್ಸ್‌ಟೇಬಲ್‌ಗಳು. ಪೋಷಕರ ಅನಾರೋಗ್ಯದ ಹಿನ್ನೆಲೆಯಲ್ಲಿ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಹಾ ಕುಂಭಮೇಳವು ಜನವರಿ 13ರಂದು ಪೌಶ್ ಪೂರ್ಣಿಮಾ ಸ್ನಾನದೊಂದಿಗೆ ಪ್ರಾರಂಭವಾಗುತ್ತದೆ.