ಕುಂದಾಪುರ ತಾಲೂಕಿನ ಮಾವಿನಕಟ್ಟೆಯ ಅಮಾನತ್ ಕೋ-ಆಪರೇಟಿವ್ ಸೊಸೈಟಿಯ 6ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಮಹಮದ್ ರಫೀಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ದಸ್ತಗಿರಿ ಮಾತನಾಡಿ, “ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸಂಸ್ಥೆಯನ್ನು ಮುನ್ನೆಡೆಸುವಲ್ಲಿ ಉತ್ತಮ ರೀತಿಯಲ್ಲಿ ಕೆಲೆಸವನ್ನು ಮಾಡುತ್ತಾ ಬಂದಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ಉನ್ನತ ಮಟ್ಟಕ್ಕೆ ತಲುಪಲಿ “ಎಂದು ಆಶಿಸಿದ್ದಾರೆ.
ಅಧ್ಯಕ್ಷ ಮಹಮದ್ ರಫೀಕ್ ಮಾತನಾಡಿ, “ಸಂಸ್ಥೆಯ ಸ್ಥಾಪನೆಗೆ ಮುನ್ನುಡಿ ಬರೆದ ಸರ್ದಾರ್ ಅವರನ್ನು ನೆನೆದರು. ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಗಣೇಶ್ ದೇವಾಡಿಗ ಹಾಗೂ ಅಕೌಂಟೆಂಟ್ ಭರತ್ ಸಂಸ್ಥೆಯನ್ನು ಮುನ್ನೆಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಶ್ಲಾಘಿಸಿದರು. ಸಂಘದ ವತಿಯಿಂದ ಶೇ. 90ರಷ್ಟು ಸಾಲ ಮರುಪಾವತಿಯಾಗಿರುವುದು ನಮ್ಮ ಗ್ರಾಹಕರು ನಮಗೆ ನೀಡುತ್ತಿರುವ ಬೆಂಬಲದ ಪ್ರತೀಕ” ಎಂದು ಉಲ್ಲೇಖಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿ.ಪಿ. ಮೊಹಮ್ಮದ್ ಗುಲ್ವಾಡಿ, ಕೆ. ಮಹಮ್ಮದ್ ಅಲಿ ಕೋಡಿ, ಹಂಝಾ ಸಾಹೇಬ್ ಹೆಮ್ಮಾಡಿ, ಜಿ.ಎಂ. ರೆಹಮಾನ್ ಗುಲ್ವಾಡಿ, ಸಾಬಾನ್ ಹಂಗಳೂರು, ಐ.ಕೆ. ಇಬ್ರಾಹಿಂ, ಗುಲ್ವಾಡಿ, ಜಮಾಲ್ ಎ. ಕುದ್ರುಮಕ್ಕಿ, ಮುನಾಫ್ ಕೋಡಿ, ಜುಬೇದ ಹಾಜಿ ಗುಲ್ವಾಡಿ, ರಹೀಮ್ ಮುಳ್ಳಿಕಟ್ಟೆ ಸೇರಿದಂತೆ ಹಲವರು ಇದ್ದರು.



















