ಶಿವಮೊಗ್ಗ: ಶಿವಮೊಗ್ಗದ ಸಾಗರ ತಾಲೂಕಿನ ಚೀಕನಹಳ್ಳಿ-ಸಾಲುಕೊಪ್ಪದಲ್ಲಿ ನೆಲೆಸಿರುವ ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನದ 64ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವು ಇದೇ ಮಾರ್ಚ್ 16 ಮತ್ತು 17 ರಂದು ಅತ್ಯಂತ ವೈಭವದಿಂದ ಜರುಗಲಿದೆ.
ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ರೇಣುಕಾನಂದ ಸ್ವಾಮಿಗಳ ಆಶೀರ್ವಾದದೊಂದಿಗೆ, ಶ್ರೀಚಕ್ರ ಆರಾಧಕರಾದ ಶ್ರೀ ಮಂಜುನಾಥ ಗಣಪತಿ ಹೆಗಡೆಯವರ ಆಚಾರತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು:
ಮಾರ್ಚ್ 16, ಸೋಮವಾರ: ಸಂಜೆ 4:44 ರಿಂದ ದೇವತಾ ಪ್ರಾರ್ಥನೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹವಾಚನ, ಋತ್ವಿಗ್ವರಣ, ಕಂಕಣ ಬಂಧನ ಹಾಗೂ ಕಳಸ ಸ್ಥಾಪನೆ ನಡೆಯಲಿದೆ. ನಂತರ ವಿಶೇಷ ರಕ್ಷಾ ವಾಸ್ತು ಯಜ್ಞ, ದಿಕ್ಪಾಲ ಬಲಿ ಮತ್ತು ಮಹಾಪೂಜೆ ನೆರವೇರಲಿದೆ.
ಮಾರ್ಚ್ 17, ಮಂಗಳವಾರ: ಬೆಳಿಗ್ಗೆ ಗಣಹೋಮ, ದೇವಿಗೆ ಪಂಚಾಮೃತ ಅಭಿಷೇಕ, ಹರಿದ್ರಾ ಅಭಿಷೇಕ ಹಾಗೂ ವಿಶೇಷ ಕಲಾ ವೃದ್ಧಿ ಹವನಗಳು ನಡೆಯಲಿವೆ. ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಅದೇ ದಿನ ಸಂಜೆ 7 ಗಂಟೆಗೆ ದೀಪೋತ್ಸವ, 7:30ಕ್ಕೆ ‘ಜನಪದ ಸಂಜೆ’ ಮತ್ತು ರಾತ್ರಿ 9:30ಕ್ಕೆ ಕಂಚಿಗದ್ದೆಯ ಶ್ರೀ ಶನೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ : ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ ಜಿ. ಪರಮೇಶ್ವರ್



















