ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಖಾಲಿ ಇರುವ 6 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ (UCSL Recruitment 2025) ಆದೇಶ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಜೂನ್ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಸಂಸ್ಥೆ: ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್
ಒಟ್ಟು ಹುದ್ದೆಗಳು: 06
ಹುದ್ದೆಗಳ ಹೆಸರು: ಡೆಪ್ಯೂಟಿ ಮ್ಯಾನೇಜರ್
ಸ್ಥಳ: ಉಡುಪಿ
ಸಂಬಳ: 96,350 ರೂಪಾಯಿ
ಯಾವ ಹುದ್ದೆ ಎಷ್ಟು ಖಾಲಿ?
ಡೆಪ್ಯೂಟಿ ಮ್ಯಾನೇಜರ್ (ಪ್ಲಾನಿಂಗ್) 01
ಡೆಪ್ಯೂಟಿ ಮ್ಯಾನೇಜರ್ (ಎಲೆಕ್ಟ್ರಿಕಲ್) 01
ಡೆಪ್ಯೂಟಿ ಮ್ಯಾನೇಜರ್ (ಮಷಿನರಿ ಮತ್ತು ಪೈಪಿಂಗ್) 01
ಡೆಪ್ಯೂಟಿ ಮ್ಯಾನೇಜರ್ (ಮೆಕ್ಯಾನಿಕಲ್) 01
ಡೆಪ್ಯೂಟಿ ಮ್ಯಾನೇಜರ್ (ಹ್ಯೂಮನ್ ರಿಸೋರ್ಸ್) 01
ಡೆಪ್ಯೂಟಿ ಮ್ಯಾನೇಜರ್ (ಮಾಹಿತಿ ಮತ್ತು ತಂತ್ರಜ್ಞಾನ) 01
ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಬಿಎ, ಕಂಪ್ಯೂಟರ್ ಸೈನ್ಸ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಜನರಲ್, ಒಬಿಸಿಯವರಿಗೆ ಮೂರು ವರ್ಷ ಹಾಗೂ ಎಸ್ಸಿ, ಎಸ್ಟಿಯವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಎಸ್ಸಿ, ಎಸ್ಟಿಯವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಬೇರೆಲ್ಲ ವರ್ಗದವರಿಗೆ ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವಿದೆ. ಆಸಕ್ತ ಅಭ್ಯರ್ಥಿಗಳು udupicsl.com ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.