ಬೆಂಗಳೂರು: ರೌಡಿಶೀಟರ್ ಹೈದರ್ ಅಲಿ (Hyder Ali) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ (Postmortem report) ಬಂದಿದ್ದು, 56 ಕಡೆ ಮಚ್ಚಿನಿಂದ ಕೊಚ್ಚಿ, ತಲೆ ಬುರುಡೆ ಛಿದ್ರಗೊಳಿಸಿ, ಕಿವಿ ಕಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನ ಅಶೋಕನಗರದ (Ashok Nagar) ಗರುಡ ಮಾಲ್ ಹತ್ತಿರ ಶನಿವಾರ ರಾತ್ರಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ್ದಾರೆ. ಡಾ.ದಿಲೀಪ್ ನೇತೃತ್ವದಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಹಂತಕರು ಹೈದರ್ ಅಲಿಯ ದೇಹದ 56 ಕಡೆ ಕೊಚ್ಚಿ ಕೊಲೆ ಮಾಡಿರುವುದು ಗೊತ್ತಾಗಿದೆ.
ತಲೆ ಬುರುಡೆ ಛಿದ್ರಗೊಳಿಸಿದ್ದು, ಕಿವಿ ಕಟ್ ಮಾಡಿದ್ದಾರೆ. ದೇಹದ ಮೇಲೆಯೇ 10 ಕಡೆ ಮಚ್ಚಿನ ಗುರುತು ಪತ್ತೆಯಾಗಿದ್ದು, ಕಾಲುಗಳ ಮಾಂಸಖಂಡ ಹೊರ ಬರುವಂತೆ ಹಾಗೂ ಮುಖ ಗುರುತು ಸಿಗದ ರೀತಿಯಲ್ಲಿ ಕೊಚ್ಚಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಡಾ. ದಿಲೀಪ್ ನೇತೃತ್ವದಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ದೇಹದ ಮೇಲೆಯೇ 10 ಕಡೆ ಮಚ್ಚಿನ ಗುರುತು ಪತ್ತೆಯಾಗಿವೆ. ಕಾಲುಗಳ ಮಾಂಸಖಂಡ ಹೊರ ಬರುವಂತೆ ಹಾಗೂ ಮುಖ ಗುರುತು ಸಿಗದ ರೀತಿಯಲ್ಲಿ ಕೊಚ್ಚಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಹೈದರ್ ಅಲಿ ಲೈವ್ ಬ್ಯಾಂಡ್‌ನಿಂದ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರ ತಿಳಿದು ಬೌರಿಂಗ್ ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದು, ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶೇಖ್ ಹೈದರ್ ಅಲಿ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.