ವಯನಾಡ್: ಕೇರಳದ ವಯನಾಡಿನ 55 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ತಮ್ಮ ಧಾರ್ಮಿಕ ಉಡುಪಿನಲ್ಲೇ ರಾಜ್ಯ ಕೇರಳದ ವಯನಾಡಿನ 55 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ತಮ್ಮ ಧಾರ್ಮಿಕ ಉಡುಪಿನಲ್ಲೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೂಟದ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಾಧನೆ ಮಾಡಿರುವ ಸನ್ಯಾಸಿನಿಯ ಹೆಸರು ಸಿಸ್ಟರ್ ಸಬೀನಾ. ಇವರು ಮಾನಂತವಾಡಿಯ ದ್ವಾರಕಾ ಎಯುಪಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪರ್ಧೆಯ ಸಮಯದಲ್ಲಿ ಅವರು ತೋರಿದ ಅದ್ಭುತ ಚೈತನ್ಯ ಮತ್ತು ಕ್ರೀಡಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೂಲತಃ ಕಾಸರಗೋಡಿನವರಾದ ಸಬೀನಾ, 1990ರಲ್ಲಿ ವಯನಾಡಿಗೆ ಬಂದು ನೆಲೆಸಿದ್ದರು. ಮುಂದಿನ ಮಾರ್ಚ್‌ನಲ್ಲಿ ನಿವೃತ್ತರಾಗಲಿರುವ ಅವರು, ಬಹುಶಃ ಇದು ತಮ್ಮ ಕೊನೆಯ ಸ್ಪರ್ಧೆಯಾಗಿರಬಹುದು ಎಂದು ತಿಳಿಸಿದ್ದಾರೆ. ಸ್ಪರ್ಧೆಯ ಆರಂಭದಲ್ಲಿ ಅವರು ಸಲೀಸಾಗಿ ಹರ್ಡಲ್ಸ್‌ಗಳನ್ನು ದಾಟುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಚಿವರ ಶ್ಲಾಘನೆ
ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಸಿಸ್ಟರ್ ಸಬೀನಾ ಅವರ ಸಾಧನೆಯನ್ನು “ಸಂಕಲ್ಪ ಶಕ್ತಿಯ ಪ್ರತೀಕ” ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಚಿತ್ರವನ್ನು ಹಂಚಿಕೊಂಡಿರುವ ಸಚಿವರು, “ಯಾವುದೇ ಗುರಿ ಸಾಧನೆಗೆ ವಯಸ್ಸು ಅಥವಾ ಸಂದರ್ಭಗಳು ಅಡ್ಡಿಯಾಗುವುದಿಲ್ಲ ಎಂಬುದನ್ನು ಸಿಸ್ಟರ್ ಸಬೀನಾ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಈ ಶಿಕ್ಷಕಿಯ ಸಮರ್ಪಣೆ ಅವರ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಫೂರ್ತಿಯಾಗಿದೆ. ಸಿಸ್ಟರ್ ಸಬೀನಾಗೆ ನನ್ನ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.