ಲಖನೌ : ಒಂದೇ ಬೈಕ್‍ನಲ್ಲಿ ಐದು ಮಂದಿ ಯುವಕರು ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಹಾಪುರದ ರಾಷ್ಟ್ರೀಯ ಹೆದ್ದಾರಿ(NH-9)ಯಲ್ಲಿ ಈ ಘಟನೆ ನಡೆದಿದ್ದು, ಐವರು ಯುವಕರಲ್ಲಿ ಒಬ್ಬನನ್ನು ಮತ್ತೊಬ್ಬ ಹಿಡಿದು ಸರ್ಕಸ್ ಮಾಡುತ್ತ ಸಾಗಿದ್ದಾರೆ. ಹಿಂದೆ ಕುಳಿತಿದ್ದ ಯುವಕ ಈ ಸವಾರಿಯನ್ನು ರೆಕಾರ್ಡ್ ಕೂಡ ಮಾಡಿದ್ದಾನೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋವನ್ನು ಬೈಕ್ ಅನ್ನು ಹಿಂಬಾಲಿಸಿದ ವಾಹನ ಸವಾರರು ತಮ್ಮ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಂಣದಲ್ಲಿ ಕಾಣಿಸಿಕೊಂಡ ಕೂಡಲೇ ಸ್ಥಳೀಯ ಅಧಿಕಾರಿಗಳು ಗಮನಿಸಿದ್ದಾರೆ.
ಈ ಸಂಬಂಧ ಪಿಲ್ಖುವಾ ಕೊಟ್ವಾಲಿಯ ಪೊಲೀಸರು, ಯುವಕರ ವಿರುದ್ಧ ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಿ, ಅಜಾಗರೂಕ ಚಾಲನೆಗಾಗಿ 31,000 ರೂ. ದಂಡ ವಿಧಿಸಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಅಧಿಕಾರಿಗಳು ಯುವಕರಿಗೆ ಎಚ್ಚರಿಕೆ ನೀಡಿದ್ದು, ಇಂತಹ ದುಸ್ಸಾಹಸಗಳು ಸವಾರರನ್ನು ಮಾತ್ರವಲ್ಲದೆ ಇತರ ಪ್ರಯಾಣಿಕರನ್ನೂ ಅಪಾಯಕ್ಕೆ ಸಿಲುಕಿಸುತ್ತವೆ ಎಂದು ಬುದ್ದಿವಾದ ಹೇಳಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು.. ಇಬ್ಬರು ಸಾವು



















