ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ನಂತರ, ಇದೇ ಮೊದಲ ಬಾರಿಗೆ ಅದರ ವ್ಯಾಪ್ತಿಯ ಐದು ನಗರಪಾಲಿಕೆಗಳು 2026–27ನೇ ಸಾಲಿನ ಬಜೆಟ್ ಮಂಡನೆಗೆ ಸಜ್ಜಾಗಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಮಾರ್ಚ್ 30ರಂದು ಈ ಐದು ಪಾಲಿಕೆಗಳ ಬಜೆಟ್ ಮಂಡನೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸರ್ಜನೆಯಾದ ನಂತರ, ಈ ಬಜೆಟ್ ಪ್ರಕ್ರಿಯೆ ಆರನೇ ಬಾರಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳಿಂದಲೇ ನಡೆಯಲಿದೆ. ಪ್ರತಿಯೊಂದು ಪಾಲಿಕೆಯೂ ತಮ್ಮ ಆದಾಯ-ವೆಚ್ಚ ಲೆಕ್ಕಾಚಾರ ಮಾಡಿ, ಸರ್ಕಾರದ ಅನುದಾನವನ್ನು ಆಧರಿಸಿ ಬಜೆಟ್ ರೂಪಿಸುತ್ತಿದೆ.
ಒಟ್ಟು ಬಜೆಟ್ ಅಂದಾಜು
ಹಿಂದಿನ ಬಾರಿ BBMP ಸುಮಾರು 19 ಸಾವಿರ ಕೋಟಿ ಬಜೆಟ್ ಮಂಡಿಸಿತ್ತು. ಆದರೆ ಈಗ ಪ್ರತ್ಯೇಕ 5 ನಗರಪಾಲಿಕೆಗಳಾಗಿ ವಿಭಜನೆಯಾದ ಹಿನ್ನೆಲೆಯಲ್ಲಿ, ಪ್ರತಿ ಪಾಲಿಕೆಯ ಬಜೆಟ್ 2,300 ಕೋಟಿಯಿಂದ 3,600 ಕೋಟಿಯೊಳಗೆ ಇರಬಹುದು ಎಂದು ಅಂದಾಜಿಸಲಾಗಿದೆ
ಆದಾಯ ಮೂಲಗಳು
- ಆಸ್ತಿ ತೆರಿಗೆ
- ಹೊಸ ಜಾಹೀರಾತು ತೆರಿಗೆ
- ಮ್ಯೂನಿಸಿಪಲ್ ಬಾಂಡ್‌ಗಳು
- ಹೊಸ ಪಾರ್ಕಿಂಗ್ ನೀತಿ
- ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ
- ಪ್ರೀಮಿಯಂ FAR ಜಾರಿ
ಬಜೆಟ್‌ನ ಆದ್ಯತೆಗಳು
- ಹೊಸ ದೊಡ್ಡ ಯೋಜನೆಗಳಿಗಿಂತ ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ
- ಮೂಲಭೂತ ಸೌಕರ್ಯ ಅಭಿವೃದ್ಧಿ
- ಜನಪರ ಕಲ್ಯಾಣ ಯೋಜನೆಗಳು
ನಿರೀಕ್ಷಿತ ಯೋಜನೆಗಳು
- ಡಿಜಿಟಲ್ ಇ-ಖಾತಾ ವ್ಯವಸ್ಥೆ ಜಾರಿ
- ಹೊಸ ಪಾರ್ಕಿಂಗ್ ವ್ಯವಸ್ಥೆ
- ಪ್ರೀಮಿಯಂ FAR ಜಾರಿ
- ವೈಟ್‌ಟಾಪಿಂಗ್ ರಸ್ತೆ
- ಸುರಂಗ ರಸ್ತೆ ಯೋಜನೆಗೆ ಅನುದಾನ
- ಫ್ಲೈಓವರ್, ಅಂಡರ್‌ಪಾಸ್ ನಿರ್ಮಾಣ
- ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
- ಉಚಿತ ಎಲೆಕ್ಟ್ರಿಕ್ ಆಟೋ (ಮಹಿಳೆ, SC/ST, ಅಲ್ಪಸಂಖ್ಯಾತರಿಗೆ)
- ಗೃಹಭಾಗ್ಯ ಯೋಜನೆ ವಿಸ್ತರಣೆ, ಒಂಟಿಮನೆ ಸಹಾಯಧನ ₹5 ಲಕ್ಷ → ₹6 ಲಕ್ಷ
- ಇಂದಿರಾ ಕ್ಯಾಂಟೀನ್ಗೆ ಹೆಚ್ಚುವರಿ ಅನುದಾನ
- ಆರೋಗ್ಯ ಕ್ಷೇತ್ರ: ನಗರಪಾಲಿಕೆ ಆಸ್ಪತ್ರೆಗಳಲ್ಲಿ ಡಯಗ್ನೋಸ್ಟಿಕ್ ಲ್ಯಾಬ್‌ಗಳು, ಆಂಬುಲೆನ್ಸ್, ಡೆಂಟಲ್ ಕ್ಲಿನಿಕ್, ಫಿಜಿಯೋಥೆರಪಿ ಸೇವೆಗಳು, “ಸೇವ್ ಮಾಮ್” ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇವಿ ಬೈಕ್‌ಗಳು
- ಕೆರೆಗಳ, ಪುಟ್ ಪಾಥ್ ಅಭಿವೃದ್ಧಿ
- ನಗರ ಕ್ಲಿನಿಕ್‌ಗಳನ್ನು ಹೈಟೆಕ್ ವ್ಯವಸ್ಥೆಗೆ ಪರಿವರ್ತನೆ
- ಗುಂಡಿ ಮುಕ್ತ ರಸ್ತೆ, ಕಸದ ಸಮಸ್ಯೆಗೆ ಪರಿಹಾರ
ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಗದರ್ಶನದಲ್ಲಿ, “ಗ್ರೇಟರ್ ಬೆಂಗಳೂರು” ಪರಿಕಲ್ಪನೆಗೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುವುದೇ ಈ ಬಜೆಟ್‌ನ ಪ್ರಮುಖ ಗುರಿ. ಮುಂದಿನ GBA ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜನಪರ ಬಜೆಟ್ ಮಂಡನೆ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – ಜೂಜುವಾಡಿ ಚೆಕ್ಪೋಸ್ಟ್ನಲ್ಲಿ 2.34 ಕೋಟಿ ರೂ. ಹಣ ಸೀಜ್



















