ಬೆಂಗಳೂರು : ವಿದೇಶದಲ್ಲಿ ಕುಳಿತು ಬೆಂಗಳೂರಿನಲ್ಲಿರುವ ವಿಸ್ಡಮ್ ಫೈನಾನ್ಸ್ ಕಂಪನಿಯ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಆರೋಪಿ ಇಸ್ಮಾಯಿಲ್ ಹಾಗೂ ಮಹಾರಾಷ್ಟ್ರದ ಅಕೌಂಟ್ ಹೋಲ್ಡರ್ ಪಟೇಲ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಪಿಎನ್ ನೆಟ್‌ವರ್ಕ್ ಬಳಸಿ ಹ್ಯಾಕ್
ವಿಪಿಎನ್ ನೆಟ್‌ವರ್ಕ್ ಬಳಸಿ ಜಸ್ಟ್ 3 ಗಂಟೆಯಲ್ಲಿ ಬರೋಬ್ಬರಿ 49 ಕೋಟಿ ಕದ್ದ ಸೈಬರ್ ವಂಚಕರು ಹಣವನ್ನ 600 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಯನ್ನ ಬಂಧಿಸಿರುವ ಪೊಲೀಸರು, ಅವರ ಬ್ಯಾಂಕ್ ಖಾತೆಯಲ್ಲಿ 10 ಕೋಟಿ ಹಣ ಫ್ರೀಜ್ ಮಾಡಿದ್ದಾರೆ. ಜೊತೆಗೆ ಲ್ಯಾಪ್ ಟಾಪ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ 7ರಂದು ಫೈನಾನ್ಸ್ ಕಂಪನಿಯೊಂದರ ಬ್ಯಾಂಕ್ ಖಾತೆಯನ್ನ ಹ್ಯಾಕ್ ಮಾಡಿದ್ದರು. ಈ ಕುರಿತು ಆ.9ರಂದು ಸಂಸ್ಥೆಯ ಫೈನಾನ್ಸ್ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಸೈಬರ್ ಪೊಲೀಸರು ಆರೋಪಿಗಾಗಿ ಕರ್ನಾಟಕ ಹಾಗೂ ಹೈದರಾಬಾದ್‌ನಲ್ಲಿ ಹುಡುಕಾಟ ನಡೆಸಿದದ್ದರು.
ತನಿಖೆ ಚುರುಕುಗೊಳಿಸಿದ ಬಳಿಕ ಆರೋಪಿ ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್‌ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಯ್ತು. ಫೈನಾನ್ಸ್ ಸಂಸ್ಥೆಯ 2 ಬ್ಯಾಂಕ್ ಖಾತೆಯಗಳಿಗೆ ಕನ್ನ ಹಾಕಿದ್ದ ಖದೀಮರು, 49 ಕೋಟಿ ದೋಚಿದ್ದ ಸೈಬರ್ ಕಳ್ಳರು ಕೆಲವೇ ನಿಮಿಷಗಳಲ್ಲಿ 600 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು ಅನ್ನೋದು ಪತ್ತೆಯಾಯಿತು. ಈ ಪ್ರಕರಣ ಭೇದಿಸಿದ ಪೊಲೀಸರು ಸದ್ಯ ಇಬದಬರಿನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಎಫ್ ಡಿ ಹೂಡಿಕೆಗೆ ಶೇ.8ರವರೆಗೆ ಬಡ್ಡಿ: ಟಾಪ್ 10 ಬ್ಯಾಂಕುಗಳ ಬಡ್ಡಿದರದ ಮಾಹಿತಿ ಇಲ್ಲಿದೆ



















