ಕಾರವಾರ: ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ಫಾರೆಕ್ಸ್ ಟ್ರೇಡಿಂಗ್ ಆ್ಯಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 46.50 ಲಕ್ಷ ರೂ. ವಂಚಿಸಿದ್ದಾರೆ.
ಎಂ.ಡಿ ಆಲಮ್ ಶಮೀಮ್ ಅಖ್ತರ್ (55). ಬಿಲ್ಲೆ ಪ್ರವೀಣಕುಮಾರ್ (35) ಮತ್ತು ವಿನಯ್ ಕುಮಾರ್ (30) ಬಂಧಿತ ಆರೋಪಿಗಳು. ಪ್ರವೀಣಕುಮಾರ್ ಮತ್ತು ವಿನಯ್ ಆರ್ಬಿಎಲ್ ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಾಗಿದ್ದು, ವಂಚನೆಗೆ ಅಕ್ರಮವಾಗಿ ಖಾತೆ ತೆರೆದು ಸಹಕರಿಸಿದ್ದಾರೆ.
ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಎಂಬವರು ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, ‘MarketAxess’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಆರೋಪಿಗಳು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ, ಮೇ 28, 2025 ರಿಂದ ಜುಲೈ 23, 2025 ರ ಅವಧಿಯಲ್ಲಿ ಹಂತ, ಹಂತವಾಗಿ ಒಟ್ಟು ರೂ. 46,50,000 ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಹಣ 75,00,000 ರೂ.ಗಳಾದರೂ ವಿತ್‌ಡ್ರಾ ಮಾಡಲು ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಖಾಸಗಿ ಬಸ್‌ಗಳ ನಡುವೆ ಭೀಕರ ಅಪಘಾತ | 6 ಮಂದಿ ಸಾವು, 28 ಮಂದಿ ಗಾಯ!



















